ರಾಷ್ಟ್ರೀಯ ರಾಷ್ಟ್ರೀಯ ಸುದ್ದಿ

ದಿಲ್ಲಿಯ ಎಲ್ಲ ಸರಕಾರಿ ಶಾಲೆಗಳಿಗೆ ನವೆಂಬರ್‌ ಒಳಗೆ ಸಿಸಿಟಿವಿ: CM ಅರವಿಂದ ಕೇಜ್ರಿವಾಲ್‌

ಹೊಸದಿಲ್ಲಿ :(ಸೀಧಿಬಾತ್ ನ್ಯೂಸ್ ಸರ್ವಿಸ್)
 ದಿಲ್ಲಿಯ ಎಲ್ಲ ಶಾಲೆಗಳಿಗೆ ಈ ವರ್ಷ ನವೆಂಬರ್‌ನೊಳಗೆ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗುವುದು ಎಂದಿರುವ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌, ಇದೊಂದು ಐತಿಹಾಸಿಕ ಮೈಲುಗಲ್ಲಾಗಲಿದೆ ಎಂದು ಹೇಳಿಕೊಂಡಿದ್ದಾರೆ.

ಲಾಜಪತ್‌ ನಗರದ ಶಹೀದ್‌ ಹೇಮು ಕಲಾನಿ ಸರ್ವೋದಯ ಬಾಲ ವಿದ್ಯಾಲಯದಲ್ಲಿ ಸಿಸಿಟಿವಿ ಯೋಜನೆಯನ್ನು ಆರಂಭಿಸಿದ ಸಿಎಂ ಕೇಜ್ರಿವಾಲ್‌, ಈ ವರ್ಷ ನವೆಂಬರ್‌ ಒಳಗಾಗಿ ದಿಲ್ಲಿಯ 1,000ಕ್ಕೂ ಅಧಿಕ ಸರಕಾರಿ ಶಾಲೆಗಳು ಸಿಸಿಟಿವಿ ಹೊಂದಲಿವೆ ಎಂದು ಹೇಳಿದರು.

ಇದೇ ರೀತಿ ಖಾಸಗಿ ಶಾಲೆಗಳಿಗೆ ಕೂಡ ಸಿಸಿಟಿವಿ ಅಳವಡಿಸಿಕೊಳ್ಳಲು ಸೂಚಿಸಲಾಗಿದೆ ಎಂದ ಕೇಜ್ರಿವಾಲ್‌, ಈ ಕುರಿತ ಸರಕಾರಿ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಅವುಗಳಿಗೆ ಆದೇಶಿಸಲಾಗಿದೆ ಎಂದು ಹೇಳಿದರು.

Source:-udayavani

ಸಂಬಂಧಿತ ಪೋಸ್ಟ್ಗಳು

‘ಧೋನಿಗಿಂತ ದೇಶವೇ ಮುಖ್ಯ’: ಗಂಭೀರ್

Ansar Aziz Nadwi

ಉನ್ನಾವ್ ಅತ್ಯಾಚಾರ ಪ್ರಕರಣ : ಕುಲದೀಪ್ ಸಿಂಗ್ ಸೆಂಗರ್ ಗೆ ಜೀವಾವಧಿ ಶಿಕ್ಷೆ

Ansar Aziz Nadwi

ಉತ್ತರಪ್ರದೇಶ ಸಚಿವ ಎಂದು ಹೇಳಿ 10 ದಿನ ಗೋವಾ ಗೆಸ್ಟ್ ಹೌಸ್ ನಲ್ಲಿ ಕಾಲ ಕಳೆದ ವ್ಯಕ್ತಿ ಬಂಧನ!

Ansar Aziz Nadwi

ಒಂದು ಕಾಮೆಂಟ್ ಬಿಡಿ

ವಿಮರ್ಶೆ ಬಿಡಿ