ಅಂತಾರಾಷ್ಟ್ರೀಯ

‘ಇನ್ನು ಸಹಿಸೋಕಾಗಲ್ಲ’: ಭಾರತದ ವಿರುದ್ಧ ಮತ್ತೆ ಗುಡುಗಿದ ಡೊನಾಲ್ಡ್ ಟ್ರಂಪ್

ವಾಷಿಂಗ್ಟನ್: (ಸೀಧಿಬಾತ್ ನ್ಯೂಸ್ ಸರ್ವಿಸ್)ಭಾರತ, ಅಮೆರಿಕದ ಉತ್ಪನ್ನಗಳಿಗೆ ಅಧಿಕ ಆಮದು ಸುಂಕ ವಿಧಿಸುತ್ತಿದ್ದು, ಇನ್ನು ಮುಂದೆ ಇದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಂಗಳವಾರ ಮತ್ತೆ ಗುಡುಗಿದ್ದಾರೆ.
ಅಮೆರಿಕದ ಉತ್ನನ್ನಗಳ ಮೇಲೆ ಹೆಚ್ಚು ಆಮದು ಸುಂಕ ವಿಧಿಸುವ ಮೂಲಕ ಭಾರತ ಅಮೆರಿಕದಿಂದ ಹೆಚ್ಚು ಲಾಭವನ್ನು ಪಡೆದುಕೊಳ್ಳುತ್ತಿದೆ ಎಂದು ಟ್ರಂಪ್ ಆರೋಪಿಸಿದ್ದಾರೆ.
ಉಭಯ ದೇಶಗಳು ವ್ಯಾಪಾರ ಭಿನ್ನಾಭಿಪ್ರಾಯಗಳ ಕುರಿತು ಮತ್ತೆ ಮಾತುಕತೆ ನಡೆಸಲಿವೆ. ಭಾರತ ಅಮೆರಿಕದ ಉತ್ಪನ್ನಗಳಿಗೆ ಅಧಿಕ ಸುಂಕ ವಿಧಿಸುವುದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಟ್ರಂಪ್ ಟ್ವೀಟ್‌ ಮಾಡಿದ್ದಾರೆ.
ಒಸಾಕಾದಲ್ಲಿ ನಡೆದ ಜಿ -20 ಶೃಂಗಸಭೆಯಲ್ಲಿ ಅಮೆರಿಕ ಅಧ್ಯಕ್ಷರು ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ನಡುವಿನ ಮಾತುಕತೆಯ ಮುಂದುವರಿದ ಭಾಗವಾಗಿ ಯುಎಸ್ಟಿಆರ್ (ಯುನೈಟೆಡ್ ಸ್ಟೇಟ್ಸ್ ಟ್ರೇಡ್ ರೆಪ್ರೆಸೆಂಟೇಟಿವ್) ಅಧಿಕಾರಿಗಳು ಮುಂದಿನ ಎರಡು ದಿನಗಳಲ್ಲಿ ಭಾರತಕ್ಕೆ ಭೇಟಿ ನೀಡಲಿದ್ದಾರೆ. ಇದರ ಬೆನ್ನಲ್ಲೇ ಟ್ರಂಪ್‌ ಈ ಹೇಳಿಕೆ ಹೊರಬಿದ್ದಿದೆ.
Source:-kannadaprabha
https://www.youtube.com/watch?v=9IAUZNIlsJc&t=105s

ಸಂಬಂಧಿತ ಪೋಸ್ಟ್ಗಳು

ಸಂಪರ್ಕಕ್ಕೆ ಸಿಗದ ವಿಕ್ರಮ್: ಭಾರತದ ಕಾಲೆಳೆಯಲು ಹೋಗಿ ಟ್ರೋಲ್ ಗೊಳಗಾದ ಪಾಕ್ ಸಚಿವ

Ansar Aziz Nadwi

ಪಾಕ್ ಗೆ ಅಂತಾರಾಷ್ಟ್ರೀಯ ಮಧ್ಯಸ್ಥಿಕೆ ನ್ಯಾಯಾಲಯದಿಂದ 5.976 ಶತಕೋಟಿ ಡಾಲರ್ ದಂಡ

Ansar Aziz Nadwi

ಬ್ರಿಟನ್ ಸಚಿವ ಸಂಪುಟಕ್ಕೆ ಸೇರಿದ ನಾರಾಯಣಮೂರ್ತಿ ಅಳಿಯ ರಿಷಿ ಸುನಕ್

Ansar Aziz Nadwi

ಒಂದು ಕಾಮೆಂಟ್ ಬಿಡಿ

ವಿಮರ್ಶೆ ಬಿಡಿ