ಅಂತಾರಾಷ್ಟ್ರೀಯ

ನಾನು ರಾಜಕುಮಾರಿ ಡಯಾನಾ ಪುನರ್ಜನ್ಮ: ಆಸ್ಟ್ರೇಲಿಯಾ ಬಾಲಕನ ವಿಚಿತ್ರ ಹೇಳಿಕೆಗೆ ಬೆಚ್ಚಿ ಬಿದ್ದ ಜಗತ್ತು

ಮೆಲ್ಬೋರ್ನ್:(ಸೀಧಿಬಾತ್ ನ್ಯೂಸ್ ಸರ್ವಿಸ್)
ನಾಲ್ಕು ವರ್ಷದ ಈ ಆಸ್ಟ್ರೇಲಿಯಾ ಬಾಲಕ ತಾನು ಬ್ರಿಟನ್‌ನ ರಾಜಕುಮಾರಿ ಡಯಾನಾಳ ಪುನರ್ಜನ್ಮ ಎಂದು ಹೇಳಿಕೊಳ್ಳುವ ಮೂಲಕ ಸುದ್ದಿಯಾಗಿದ್ದಾರೆ.

ಬಾಲಕನ ತಂದೆ ಆಸ್ಟ್ರೇಲಿಯಾ ಖ್ಯಾತ ದೂರದರ್ಶನ ವಾಹಿನಿಯೊಂದರಲ್ಲಿ ನಿರೂಪಕನಾಗಿದ್ದು ತನ್ನ ಮಗ ತಾನು ಡಯಾನಾಳ ಪುನರ್ಜನ್ಮ ಎಂದು ನಂಬಿರುವುದಾಗಿ ಹೇಳಿದ್ದಾರೆ.

ಆಸ್ಟ್ರೇಲಿಯಾ ಟಿವಿ ನಿರೂಪಕ ಡೇವಿಡ್ ಕ್ಯಾಂಪ್ ಬೆಲ್ ಅವರ ಮಗ ಬಿಲ್ಲಿ ಕ್ಯಾಂಪ್ ಬೆಲ್ 1997 ರಲ್ಲಿ ಕಾರು ಅಪಘಾತದಲ್ಲಿ ಮ್ಯುತಪಟ್ಟ ರಾಜಕುಮಾರಿ ಡಯಾನಾಳ ಪುನರ್ಜನ್ಮ ತಾನೆಂದು ಹೇಳಿದ್ದಾನೆ. ಡಯಾನಾ ಸಾವಿಗೀಡಾಗಿ 18 ವರ್ಷಗಳ ನಂತರ ಮತ್ತೆ ತಾನು ಜನಿಸಿರುವುದಾಗಿ ಬಾಲಕ ಹೇಳುತ್ತಿರುವುದಾಗಿ ಯುಕೆ ಮಾದ್ಯಮಗಳು ವರದಿ ಮಾಡಿದೆ.

“ಬಿಲ್ಲಿ ಗೆ ಆಗ ಎರಡು ವರ್ಷ!ಒಮ್ಮೆ ಡಯಾನಾಳ ಚಿತ್ರವಿದ್ದ ಕಾರ್ಡ್ ನೋಡಿದ್ದ, ಆಗ ಅದು ನಾನೇ! ನಾನು ರಾಜಕುಮಾರಿಯಾದಾಗ ಹೀಗೆಯೇ ಇದ್ದೆ! ಎಂದಿದ್ದನು” ಬಾಲಕನ ತಂದೆ ಡೇವಿಡ್ ಕ್ಯಾಂಪ್ ಬೆಲ್ ಹೇಳಿದ್ದಾರೆ. ಅಲ್ಲದೆ ಇದುವರೆಗೂ ಯಾನಾಳೊಂದಿಗಿನ ನನ್ನ ಮಗನ ಗೀಳು ನಿಂತಿಲ್ಲ ಎಂದಿದ್ದಾರೆ.

ಬಾಲಕ ಬಿಲ್ಲಿ ಡಯಾನಾರ ಯಾವುದೇ ಜೀವನದ ಘಟನೆಯನ್ನು ಸಹ ವಿವರಿಸಬಲ್ಲವನಿದ್ದಾನೆ.ಅಲ್ಲದೆ ಡಯಾನಾ ಮಕ್ಕಳಾದ ವಿಲಿಯಂ ಹಾಗೂ ಹ್ಯಾರಿ ನನ್ನ ಮಕ್ಕಳು ಎನ್ನುತ್ತಾನೆ. ಬಾಲಕ ಅಪರಿಚಿತ ಕುಟುಂಬ ಸದಸ್ಯರೊಡನೆ ಆತ್ಮೀಯನೆಂಬಂತೆ ಮಾತನಾಡಬಲ್ಲ.  ಅಷ್ಟೇ ಅಲ್ಲದೆ ಹುಟ್ಟಿದ ಕೆಲವೇ ಗಂಟೆಗಳಲ್ಲಿ ಮರಣಿಸಿದ್ದ ರಾಜಕುಮಾರಿ ಡಯಾನಾ ಸೋದರ ಜಾನ್ ಬಗ್ಗೆಯೂ ಬಾಲಕ ಮಾತನಾಡುತ್ತಾನೆ ಎಂದು ಅವನ ತಂದೆ ಅಚ್ಚರಿಯಿಂದ ವಿವರಿಸಿದ್ದಾರೆ.

Source:-kannadaprabha

ಸಂಬಂಧಿತ ಪೋಸ್ಟ್ಗಳು

ಪತ್ನಿಯ ಲವರ್ ವಿರುದ್ಧ ಮೊಕದ್ದಮೆ ದಾಖಲಿಸಿ 5.3 ಕೋಟಿ ಹಣ ಪಡೆದ ಅಮೆರಿಕಾ ಪ್ರಜೆ!

Ansar Aziz Nadwi

ನ್ಯೂಜೆರ್ಸಿಯಲ್ಲಿ ಗುಂಡಿನ ದಾಳಿ: ಪೊಲೀಸ್ ಅಧಿಕಾರಿ ಸೇರಿ 6 ಮಂದಿ ಸಾವು

Ansar Aziz Nadwi

ಕಾಶ್ಮೀರ ವಿಷಯದಲ್ಲಿ ಎಂದಿಗೂ ರಾಜಿ ಆಗುವುದಿಲ್ಲ-ಪಾಕಿಸ್ತಾನ ಸೇನಾ ಮುಖ್ಯಸ್ಥ

Ansar Aziz Nadwi

ಒಂದು ಕಾಮೆಂಟ್ ಬಿಡಿ

ವಿಮರ್ಶೆ ಬಿಡಿ