ಅಂತಾರಾಷ್ಟ್ರೀಯ ಗಲ್ಫ್

ದುಬೈನಲ್ಲಿ ಶೋ ವೇಳೆ ಉದಯೋನ್ಮುಖ ಸ್ಯ್ಟಾಂಡಪ್ ಕಮಿಡಿಯನ್ ಸಾವು!

ದುಬೈ:(ಸೀಧಿಬಾತ್ ನ್ಯೂಸ್ ಸರ್ವಿಸ್)
ದುಬೈನಲ್ಲಿ ಭಾರತ ಮೂಲದ ಉದಯೋನ್ಮುಖ ಸ್ಯ್ಟಾಂಡಪ್ ಕಮಿಡಿಯನ್ ಒಬ್ಬರು ಕಾರ್ಯಕ್ರಮ ನಡೆಯುತ್ತಿದ್ದ ಸಂದರ್ಭದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ.

ಮೂಲಗಳ ಪ್ರಕಾರ ಭಾರತ ಮೂಲದ ಮಂಜುನಾಥ್ ನಾಯ್ಡು ಎಂಬ ಸ್ಯ್ಟಾಂಡಪ್ ಕಮಿಡಿಯನ್ ದುಬೈನಲ್ಲಿ ನಡೆಯುತ್ತಿದ್ದ ಕಾರ್ಯಕ್ರಮದ ವೇಳೆ ಹೃದಯಾಘಾತವಾಗಿ ಸ್ಥಳದಲ್ಲೇ ಕುಸಿದಿ ಬಿದ್ದು ಸಾವನ್ನಪ್ಪಿದ್ದಾರೆ. ಆದರೆ ಕಾರ್ಯಕ್ರಮದಲ್ಲಿ ಕುಳಿತಿದ್ದ ಜನ ಮಾತ್ರ ಮಂಜುನಾಥ್ ಕಾಮಿಡಿ ಮಾಡುತ್ತಿದ್ದಾರೆ ಎಂದು ಭಾವಿಸಿದ್ದಾರೆ. ಆತ ಕುಸಿದು ಬಿದ್ದು ಸುಮಾರು ನಿಮಿಷಗಳ ಬಳಿಕವೂ ಆತ ಮೇಲೇಳದೇ ಇದ್ದಿದ್ದರಿಂದ ಅನುಮಾನಗೊಂಡ ಕಾರ್ಯಕ್ರಮದ ಆಯೋಜಕರು ಕೂಡಲೇ ಓಡಿ ಬಂದು ಪರೀಕ್ಷಿಸಿದ್ದಾರೆ.

ಈ ವೇಳೆಗಾಗಲೇ ಮಂಜುನಾಥ್ ನಾಯ್ಡು ಸಾವನ್ನಪ್ಪಿದ್ದರು ಎಂದು ತಿಳಿದುಬಂದಿದೆ. ಪ್ರಸ್ತುತ ಮಂಜುನಾಥ್ ನಾಯ್ಡು ಅವರ ಪೋಷಕರೂ ಕೂಡ ದುಬೈನಲ್ಲೇ ಇದ್ದು ಅವರಿಗೆ ಮಾಹಿತಿ ನೀಡಲಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.

Source:-udayavani

ಸಂಬಂಧಿತ ಪೋಸ್ಟ್ಗಳು

ರಷ್ಯಾಗೆ 1 ಬಿಲಿಯನ್ ಡಾಲರ್ ಸಾಲ ನೀಡಲಿರುವ ಭಾರತ: ಉದ್ದೇಶ ಏನು ಗೊತ್ತಾ?

Ansar Aziz Nadwi

ನೇಪಾಳ ಪ್ರವಾಹ: ಸಾವಿನ ಸಂಖ್ಯೆ 43ಕ್ಕೆ ಏರಿಕೆ, ಇನ್ನೂ 24 ಮಂದಿ ನಾಪತ್ತೆ

Ansar Aziz Nadwi

ಆಫ್ಘಾನಿಸ್ತಾನದಲ್ಲಿ ಮತ್ತೆ ಉಗ್ರರ ಅಟ್ಟಹಾಸ; ತ್ರಿವಳಿ ಸ್ಫೋಟ, ಕನಿಷ್ಛ 5 ಮಂದಿ ಸಾವು

Ansar Aziz Nadwi

ಒಂದು ಕಾಮೆಂಟ್ ಬಿಡಿ

ವಿಮರ್ಶೆ ಬಿಡಿ