ಅಂತಾರಾಷ್ಟ್ರೀಯ

ಚೀನಾದಲ್ಲಿ ಭೂ ಕುಸಿತ: ಸಾವನ್ನಪ್ಪಿದವರ ಸಂಖ್ಯೆ 15ಕ್ಕೇರಿಕೆ

ಗುಯಾಂಗ್:(ಸೀಧಿಬಾತ್ ನ್ಯೂಸ್ ಸರ್ವಿಸ್)ನೈರುತ್ಯ ಚೀನಾದ ಗುಯಿಜೊವು ಪ್ರಾಂತ್ಯದಲ್ಲಿ ಭೂಕುಸಿತ ಸಂಭವಿಸಿದ ಪರಿಣಾಮ ಸಾವನ್ನಪ್ಪಿದವರ ಸಂಖ್ಯೆ 15ಕ್ಕೆ ಏರಿಕೆಯಾಗಿದೆ ಎಂದು ಸ್ಥಳೀಯ ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.ಗುರುವಾರ ಬೆಳಗ್ಗೆ 8 ಗಂಟೆ ಸುಮಾರಿಗೆ 15 ಜನರು ಮೃತಪಟ್ಟಿದ್ದು, ಇನ್ನೂ 50 ಜನರನ್ನು ರಕ್ಷಿಸಲಾಗಿದೆ. ಸುಮಾರು 38 ಜನರು ಕಾಣೆಯಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಘಟನಾ ಪ್ರದೇಶದಲ್ಲಿ ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದ್ದು, ಈ ವರೆಗೂ 13 ಶವಗಳನ್ನು ಹೊರತೆಗೆಯಲಾಗಿದೆ.ಮಂಗಳವಾರ ರಾತ್ರಿ ಲಿಯುಪನ್ಶುಯಿ ನಗರದ ಶುಚೆಂಗ್ ಕೌಂಟಿಯ ಒಂದು ಹಳ್ಳಿಯಲ್ಲಿ ಭೂಕುಸಿತ ಉಂಟಾದ ಪರಿಣಾಮ ಸುಮಾರು 21 ಮನೆಗಳು ಧರೆಗುರುಳಿವೆ. ಭೂಕುಸಿತ ಸಂಭವಿಸಿದಾಗ ಈ ಪ್ರದೇಶದಲ್ಲಿ 50 ಕ್ಕೂ ಹೆಚ್ಚು ಜನರು ಇದ್ದರು ಎಂದು ರಕ್ಷಣಾ ಕಾರ್ಯಕರ್ತರು ತಿಳಿಸಿದ್ದಾರೆ. ಸುಮಾರು 1 ಸಾವಿರಕ್ಕೂ ಅಧಿಕ ರಕ್ಷಣಾ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ.

source:-kannadaprabha

ಸಂಬಂಧಿತ ಪೋಸ್ಟ್ಗಳು

ಸೊಮಾಲಿಯಾದಲ್ಲಿ ಟ್ರಕ್ ಬಾಂಬ್ ಸ್ಫೋಟ, ಕನಿಷ್ಠ 73 ಮಂದಿ ಸಾವು

Ansar Aziz Nadwi

ಸಿಎಬಿ ಪರಿಣಾಮಗಳನ್ನು ವಿಶ್ವಸಂಸ್ಥೆ ಸೂಕ್ಷ್ಮವಾಗಿ ಗಮನಿಸುತ್ತಿದೆ: ಗುಟೆರಸ್

Ansar Aziz Nadwi

ಕೊನೆಗೂ ಭಾರತಕ್ಕೆ ವಾಯುಗಡಿ ತೆರೆದ ಪಾಕಿಸ್ತಾನ, ವಿಮಾನ ಸಂಚಾರ ಪುನಾರಂಭ!

Ansar Aziz Nadwi

ಒಂದು ಕಾಮೆಂಟ್ ಬಿಡಿ

ವಿಮರ್ಶೆ ಬಿಡಿ