ಅಂತಾರಾಷ್ಟ್ರೀಯ

ಮಲೇಷ್ಯಾದಲ್ಲಿ ಝಾಕೀರ್ ನಾಯಕ್ ಭಾಷಣಕ್ಕೆ ನಿಷೇಧ: ವರದಿ

(ಸೀಧಿಬಾತ್ ನ್ಯೂಸ್ ಸರ್ವಿಸ್)ವಿವಾದಾತ್ಮಕ ಇಸ್ಲಾಮಿಕ್  ಪ್ರಚಾರಕ ಝಾಕೀರ್ ನಾಯಕ್ ಮಲೇಷ್ಯಾದಲ್ಲಿ ಭಾಷಣ ಮಾಡುವುದಕ್ಕೆ ನಿಷೇಧಿಸಲಾಗಿದೆ ಎಂದು ಸ್ಥಳೀಯ ಮಾಧ್ಯಮ ವರದಿಗಳು ಮಂಗಳವಾರ ತಿಳಿಸಿವೆ.

ಹಿಂದೂ ಮತ್ತು ಚೀನಿಯರ ವಿರುದ್ಧ ಜನಾಂಗೀಯ ಹೇಳಿಕೆ ನೀಡಿದ ನಂತರ ನಾಯಕ್ ಅವರನ್ನು ಎರಡನೇ ಬಾರಿಗೆ ಸೋಮವಾರ ವಿಚಾರಣೆಗೆ ಕರೆಸಲಾಗಿದೆ.ಪ್ರಧಾನಿ ಮಹಾತಿರ್ ಮೊಹಮದ್ ಅವರು ವಿವಾದಾತ್ಮಕ ಭಾರತೀಯ ಮೂಲದ ಪ್ರಚಾರಕನಿಗೆ  ದೇಶದ ರಾಜಕೀಯ ಚಟುವಟಿಕೆಗಳಲ್ಲಿ ಭಾಗವಹಿಸಲು ಅವಕಾಶವಿಲ್ಲ ಎಂದು ಹೇಳಿದ ಕೆಲವೇ ಗಂಟೆಗಳ ನಂತರ.ಈ ವಿಚಾರಣೆ ನಡೆದಿತ್ತು.

ಅಕ್ರಮ ಹಣ ವರ್ಗಾವಣೆ ಹಾಗೂ ದ್ವೇಷಪೂರಿತ ಭಾಷಣಗಳ ಮೂಲಕ ಉಗ್ರವಾದವನ್ನು ಪ್ರಚೋದಿಸಿದ ಆರೋಪದ ಮೇಲೆ 2016 ರಿಂದ ಭಾರತಕ್ಕೆ ಮೋಸ್ಟ್ ವಾಂಟೆಡ್ ಆಗಿರುವ ನಾಯಕ್ ಅವರನ್ನುರಾಯಲ್ ಮಲೇಷ್ಯಾ ಪೊಲೀಸ್ ಪ್ರಧಾನ ಕಚೇರಿಯಲ್ಲಿ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಬರ್ನಾಮಾ ಸುದ್ದಿ ಸಂಸ್ಥೆ ಸೋಮವಾರ ವರದಿ ಮಾಡಿದೆ. .ಮುಸ್ಲಿಂ ಬಹುಸಂಖ್ಯಾತ ಮಲೇಷ್ಯಾದಲ್ಲಿ ಖಾಯಂ ನಿವಾಸಿಯಾಗಿರುವ 53 ವರ್ಷದ ಝಾಕೀರ್ ನಾಯಕ್ ತನ್ನ ಹೇಳಿಕೆಯನ್ನು ಆಗಸ್ಟ್ 16 ರಂದು ಮೊದಲ ಬಾರಿಗೆ ದಾಖಲಿಸಿದ್ದಾರೆ ಎಂದು ವರದಿ ತಿಳಿಸಿದೆ.

ಆಗಸ್ಟ್ 3 ರಂದು ಕೋಟಾ ಬಾರೂನಲ್ಲಿ ನಡೆದ ಕಾರ್ಯಕ್ರಮದಲ್ಲಿ ನಾಯಕ್ ಮಲೇಷಿಯಾದ ಹಿಂದೂಗಳು ಮತ್ತು ಚೀನೀಯರ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಲಾಗಿದೆ, ಅವರನ್ನು ಭಾರತಕ್ಕೆ ಗಡೀಪಾರು ಮಾಡುವಂತೆ ಸಹ ಅಲ್ಲಿನ ಅಧಿಕಾರಿಗಳು ಸರ್ಕಾರಕ್ಕೆ ಮನವಿ ಮಾಡಿದ್ದರು.

Source:-kannadaprabha

ಸಂಬಂಧಿತ ಪೋಸ್ಟ್ಗಳು

ಮೂವರು ಸಾಧಕರಿಗೆ ವೈದ್ಯಕೀಯ ನೋಬೆಲ್ ಗೌರವ

Ansar Aziz Nadwi

ಅಫ್ಘಾನಿಸ್ತಾನ ದಾಳಿ : 20 ಉಗ್ರರ ಹತ್ಯೆ

Ansar Aziz Nadwi

ಲಂಡನ್ ನಲ್ಲಿ ಮತ್ತೆ ಉಗ್ರ ದಾಳಿ; 2 ಸಾವು, ಶಸ್ತ್ರಧಾರಿ ಉಗ್ರನ ಹೊಡೆದುರುಳಿಸಿದ ಪೊಲೀಸರು!

Ansar Aziz Nadwi

ಒಂದು ಕಾಮೆಂಟ್ ಬಿಡಿ

ವಿಮರ್ಶೆ ಬಿಡಿ