ಅಂತಾರಾಷ್ಟ್ರೀಯ

ಮೊದಲು ಅಣ್ವಸ್ತ್ರ ಬಳಕೆ ಮಾಡಲ್ಲ ಎಂಬ ನಿಯಮವೇನೂ ಇಲ್ಲ: ಪಾಕ್ ಸೇನೆಯ ಉದ್ಧಟತನ

ಇಸ್ಲಾಮಾಬಾದ್:(ಸೀಧಿಬಾತ್ ನ್ಯೂಸ್ ಸರ್ವಿಸ್) ಪಾಕಿಸ್ತಾನ ಮೊದಲು ಅಣ್ವಸ್ತ್ರ ಬಳಕೆ ಮಾಡುವುದಿಲ್ಲ ಎಂಬ ನಿಯಮವೇನೂ ಇಲ್ಲ. ಎದುರಾಳಿಗಳ ದಾಳಿ ಸಾಧ್ಯತೆ ಅರಿಯುತ್ತಲೇ ನಾವೇ ಮೊದಲು ಅಣ್ವಸ್ತ್ರಗಳನ್ನು ಪ್ರಯೋಗ ಮಾಡಬಹುದು ಎಂದು ಪಾಕಿಸ್ತಾನ ಸೇನೆ ಉದ್ಧಟತನದ ಹೇಳಿಕೆ ನೀಡಿದೆ.

ಈ ಕುರಿತಂತೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಪಾಕಿಸ್ತಾನ ಸೇನಾ ವಕ್ತಾರ ಮೇಜರ್ ಜನರಲ್ ಆಸಿಫ್ ಗಫೂರ್, ಪಾಕಿಸ್ತಾನ ಮೊದಲು ಅಣ್ವಸ್ತ್ರ ಬಳಕೆ ಮಾಡುವುದಿಲ್ಲ ಎಂಬ ನಿಯಮವೇನೂ ಇಲ್ಲ. ಎದುರಾಳಿಗಳ ದಾಳಿ ಸಾಧ್ಯತೆ ಅರಿಯುತ್ತಲೇ ನಾವೇ ಮೊದಲು ಅಣ್ವಸ್ತ್ರಗಳನ್ನು ಪ್ರಯೋಗ ಮಾಡಬಹುದು ಎಂದು ಹೇಳಿದ್ದಾರೆ.

ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಅಣ್ವಸ್ತ್ರ ಮೊದಲು ಬಳಕೆ ಮಾಡುವುದಿಲ್ಲ ಎಂಬ ಭಾರತದ ನಿಯಮವನ್ನು ನಾವು ಮರು ಪರಿಶೀಲಿಸಬೇಕಾಗುತ್ತದೆ ಎಂಬ ಹೇಳಿಕೆಗೆ ತಿರುಗೇಟು ನೀಡಿರುವ ಅವರು, ನಮಗೆ ಯಾವ ನಿಯಮವೂ ಇಲ್ಲ. ಇದು ಭಾರತಕ್ಕೆ ಬಿಟ್ಟ ವಿಚಾರ. ನಾವು ಅಣ್ವಸ್ತ್ರ ಬಳಕೆ ಮಾಡಬೇಕೆ ಅಥವಾ ಇಲ್ಲವೇ ಎಂಬುದು ಆ ದೇಶ ಕೈಗೊಳ್ಳುವ ನಿರ್ಣಯಗಳ ಮೇಲೆ ಆಧಾರಿತವಾಗಿರುತ್ತದೆ. ದೇಶದ ಅಸ್ತಿತ್ನಕ್ಕೆ ಧಕ್ಕೆಯಾಗುವ ಯಾವುದೇ ಹುಚ್ಚು ಸಾಹಸಕ್ಕೆ ಭಾರತ ಕೈ ಹಾಕಿದರೆ, ನಾವು ಅಣ್ವಸ್ತ್ರಗಳಿಗೆ ಕೈಹಾಕಬೇಕಾಗುತ್ತದೆ ಎಂದು ಗಫೂರ್ ಎಚ್ಚರಿಕೆ ನೀಡಿದ್ದಾರೆ.

ಇನ್ನು ಈ ಹಿಂದೆಯೂ ಕೂಡ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಕೂಡ ಭಾರತದ ವಿರುದ್ಧ ಅಣ್ವಸ್ತ್ಪ ಪ್ರಯೋಗಿಸುವ ಮಾತನಾಡಿದ್ದರು. ಇದರ ಬೆನ್ನಲ್ಲೇ ಪಾಕ್ ಸೇನೆಯ ಈ ಹೇಳಿಕೆ ಅವರ ಯುದ್ಧೋನ್ಮಾದದ ಪ್ರದರ್ಶನವಾಗಿದೆ.

Source:-kannadaprabha

ಸಂಬಂಧಿತ ಪೋಸ್ಟ್ಗಳು

ನಾನು ಸಲಿಂಗಕಾಮಿಯಾಗಲು ಆಪಲ್ ಕಾರಣ: ಕೋರ್ಟ್ ಮೆಟ್ಟಿಲೇರಿದ ವ್ಯಕ್ತಿ!

Ansar Aziz Nadwi

ಭಾರತದಿಂದ ನೀರು ಬಿಡುಗಡೆ: ಪಾಕಿಸ್ತಾನಕ್ಕೆ ಪ್ರವಾಹ ಭೀತಿ

Ansar Aziz Nadwi

‘ಕುಚ್ ಕುಚ್ ಹೋತಾ ಹೈ’ ಹಾಡು ಹೇಳಿ ಅಚ್ಚರಿಗೊಳಿಸಿದ ಮಡಗಾಸ್ಕರ್ ರಕ್ಷಣಾ ಮಂತ್ರಿ!

Ansar Aziz Nadwi

ಒಂದು ಕಾಮೆಂಟ್ ಬಿಡಿ

ವಿಮರ್ಶೆ ಬಿಡಿ