ಅಂತಾರಾಷ್ಟ್ರೀಯ ಅಪರಾಧ ಗಲ್ಫ್

ದುಬೈನಲ್ಲಿ ಭಾರತೀಯ ಅಪ್ರಾಪ್ತೆಗೆ ಪಾಕ್ ಪ್ರಜೆಯಿಂದ ಕಿರುಕುಳ

ದುಬೈ:(ಸೀಧಿಬಾತ್ ನ್ಯೂಸ್ ಸರ್ವಿಸ್) ಪಾಕಿಸ್ತಾನದ ಪ್ರಜೆಯೊಬ್ಬ ದುಬೈನಲ್ಲಿ ನೆಲೆಸಿದ್ದ ಭಾರತೀಯ ಮೂಲದ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂಬ ಆರೋಪ ಕೇಳಿಬಂದಿದ್ದು, ಈ ಸಂಬಂಧ ದುಬೈ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ.

ಪಾಕ್ ಮೂಲದ 35 ವರ್ಷದ ಡೆಲಿವರಿ ಸಿಬ್ಬಂದಿ ಮೇಲೆ ಆರೋಪ ಕೇಳಿಬರುತ್ತಿದೆ. ದುಬೈನಲ್ಲಿ ವಸತಿ ಕಟ್ಟಡದ ಲಿಫ್ಟ್‌ವೊಂದರಲ್ಲಿ ಡೆಲಿವರಿ ಸಿಬ್ಬಂದಿ 12 ವರ್ಷದ ಭಾರತೀಯ ಬಾಲಕಿಗೆ ಕಿರುಕುಳ ನೀಡಿದ್ದಾನೆ.

ಪತ್ರಿಕೆಯೊಂದರ ವರದಿ ಪ್ರಕಾರ, ಜೂನ್ 16ರಂದು ಈ ಘಟನೆ ನಡೆದಿದೆ. ಡೆಲಿವರಿ ಸಿಬ್ಬಂದಿ ಭಾರತದ ಬಾಲಕಿ ವಾಸಿಸುತ್ತಿದ್ದ ವಸತಿ ನಿಲಯಕ್ಕೆ ಡೆಲಿವರಿ ನೀಡಲು ಬಂದಿದ್ದನು. ಅಂದು ಬಾಲಕಿ ಹಾಗೂ ಆತ ಲಿಫ್ಟ್‌ನಲ್ಲಿ ಹೋಗುತ್ತಿದ್ದ ವೇಳೆ ಅಪ್ರಾಪ್ತೆಯನ್ನು ಅಸಭ್ಯವಾಗಿ ಸ್ಪರ್ಶಿಸಿದ್ದಾನೆ ಎಂದು ದೂರು ದಾಖಲಾಗಿದೆ. ಆದರೆ ಈ ಆರೋಪವನ್ನು ಆರೋಪಿ ತಳ್ಳಿ ಹಾಕಿದ್ದಾನೆ.

ಪೊಲೀಸ್ ತನಿಖೆಯ ವೇಳೆ ಭಾರತೀಯ ಮೂಲದ 34 ವರ್ಷದ ಶಿಕ್ಷಕಿ ಸಾಕ್ಷ್ಯ ಹೇಳಿದ್ದಾರೆ. ಗಣಿತ ಕಲಿಯಲು ಬಾಲಕಿ ನನ್ನ ಮನೆಗೆ ಟ್ಯೂಷನ್‍ಗೆ ಬರುತ್ತಾಳೆ. ಜೂನ್ 16ರಂದು ಕೂಡ ಎಂದಿನಂತೆ ಬಾಲಕಿ ಟ್ಯೂಷನ್‍ಗೆ ಬಂದಿದ್ದಳು. ಈ ಸಂದರ್ಭದಲ್ಲಿ ಅವಳು ಕೆಲ ವಸ್ತುಗಳನ್ನು ಮನೆಯಲ್ಲಿಯೇ ಮರೆತು ಬಂದಿದ್ದಳು. ಆದ್ದರಿಂದ ಅವುಗಳನ್ನು ತೆಗೆದುಕೊಂಡು ಬರುತ್ತೇನೆಂದು ಬಾಲಕಿ ಮನೆ ಕಡೆಗೆ ಹೋಗಿದ್ದಳು. ಬಳಿಕ ಅವಳು ವಾಪಸ್ ಮರಳಿ ಬಂದಾಗ ಆಕೆಯ ಮುಖದಲ್ಲಿ ಭಯ ಎದ್ದು ಕಾಣುತ್ತಿತ್ತು, ನಡಗುತ್ತಾ, ಅಳುತ್ತಿದ್ದಳು. ನಂತರ ಬಾಲಕಿಯನ್ನು ವಿಚಾರಿಸಿದಾಗ, ನಾನು ಲಿಫ್ಟ್‌ನಲ್ಲಿ ಬರುವಾಗ ವ್ಯಕ್ತಿಯೊಬ್ಬ ವಿಳಾಸ ಕೇಳುವ ನೆಪದಲ್ಲಿ ಹತ್ತಿರ ಬಂದು ನನ್ನನ್ನು ಗಟ್ಟಿಯಾಗಿ ಹಿಡಿದುಕೊಂಡನು ಎಂದು ಬಾಲಕಿ ನನ್ನ ಬಳಿ ಹೇಳಿಕೊಂಡಳು ಎಂದು ತಿಳಿಸಿದ್ದಾರೆ.

ಕೂಡಲೇ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಆರೋಪಿಯ ಕೃತ್ಯ ಬೆಳಕಿಗೆ ಬಂದಿದೆ. ಈಗಾಗಲೇ ಆರೋಪಿಯನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿದ್ದು, ಸೆಪ್ಟೆಂಬರ್ 16ರಂದು ಆರೋಪಿಗೆ ದುಬೈ ನ್ಯಾಯಾಲಯ ಶಿಕ್ಷೆ ವಿಧಿಸಲಿದೆ.

Source:-publictv

ಸಂಬಂಧಿತ ಪೋಸ್ಟ್ಗಳು

ಮಗಳನ್ನು ಕೊಂದು ಕಿರುತೆರೆ ನಟಿ ಆತ್ಮಹತ್ಯೆ

Ansar Aziz Nadwi

7ನೇ ತರಗತಿ ವಿದ್ಯಾರ್ಥಿನಿಯನ್ನು ಗರ್ಭಿಣಿ ಮಾಡಿದ ಶಿಕ್ಷಕ

Ansar Aziz Nadwi

ರಾಜಕೀಯ ದ್ವೇಷಕ್ಕೆ ಗುಂಡಿಕ್ಕಿ ಕೊಂದವರು ಅರೆಸ್ಟ್

Ansar Aziz Nadwi

ಒಂದು ಕಾಮೆಂಟ್ ಬಿಡಿ

ವಿಮರ್ಶೆ ಬಿಡಿ