ಅಂತಾರಾಷ್ಟ್ರೀಯ

ನಾನು ಸಲಿಂಗಕಾಮಿಯಾಗಲು ಆಪಲ್ ಕಾರಣ: ಕೋರ್ಟ್ ಮೆಟ್ಟಿಲೇರಿದ ವ್ಯಕ್ತಿ!

ಮಾಸ್ಕೋ:(ಸೀಧಿಬಾತ್ ನ್ಯೂಸ್ ಸರ್ವಿಸ್) ನಾನು ಸಲಿಂಗಕಾಮಿಯಾಗುವುದಕ್ಕೆ ಆಪಲ್ ಮೊಬೈಲ್ ಕಾರಣ, ಇದರ ಪರಿಣಾಮವಾಗಿ ನೈತಿಕ ಹಾಗೂ ಮಾನಸಿಕ ಹಾನಿಗೆ ಪರಿಹಾರ ಕೊಡಿಸಬೇಕೆಂದು ವ್ಯಕ್ತಿಯೊಬ್ಬ ಕೋರ್ಟ್ ಮೊರೆ ಹೋಗಿದ್ದಾನೆ!

ರಷ್ಯಾದಲ್ಲಿ ಈ ವಿಲಕ್ಷಣ ಘಟನೆ ವರದಿಯಾಗಿದೆ. ಕೋರ್ಟ್ ಮೊರೆ ಹೋಗಿರುವ ವ್ಯಕ್ತಿಯ ಪ್ರಕಾರ ಐಫೋನ್ ಆಪ್ ನಿಂದ ಆತ ಸಲಿಂಗಕಾಮಿಯಾಗಿದ್ದಾನಂತೆ! ಇದಕ್ಕಾಗಿ ಕೋರ್ಟ್ ಆತನಿಗೆ 15,000 ಅಮೆರಿಕನ್ ಡಾಲರ್ ಪರಿಹಾರ ಕೊಡಿಸಬೇಕಂತೆ!

ಆಗಿದ್ದಿಷ್ಟು: ಇಂದು ಕೋರ್ಟ್ ಮೆಟ್ಟಿಲೇರಿರುವ ವ್ಯಕ್ತಿ ಇತ್ತೀಚೆಗೆ ತಾನು ಬಿಟ್ ಕಾಯಿನ್ ಗಾಗಿ ಆರ್ಡರ್ ನೀಡಿದ್ದ ಆದರೆ ಆತನಿಗೆ ಅದರ ಬದಲು ಗೇಕಾಯಿನ್ (GayCoin) ಎಂಬ ಕ್ರಿಪ್ಟೋಕರೆನ್ಸಿ ಸ್ಮಾರ್ಟ್ ಫೋನ್ ಆಪ್ ಮೂಲಕ ತಲುಪಿತ್ತು.

ಗೇ ಕಾಯಿನ್ ನ್ನು ತಲುಪಿಸಿದಾಗ ಅದರ ಮೇಲೆ “Don’t judge until you try,” ಎಂಬ ಸಂದೇಶ ಬಂದಿತ್ತು. ಇದೇ ಸಂದೇಶವನ್ನು ನಂಬಿಕೊಂಡು ನಿಜವಾಗಿಯೂ ನಾನು ಪ್ರಯೋಗ ಮಾಡದೇ ಹೇಗೆ ನಿರ್ಧಾರ ಮಾಡಲು ಸಾಧ್ಯ? ಎಂದು ಸಲಿಂಗಕಾಮ ಸಂಬಂಧವನ್ನು ಬೆಳೆಸಲು ಯತ್ನಿಸಿದೆ. ಈಗ ನನಗೆ ಓರ್ವ ಬಾಯ್ ಫ್ರೆಂಡ್ ಇದ್ದಾನೆ. ಇದನ್ನು ನನ್ನ ಪೋಷಕರಿಗೆ ಹೇಗೆ ತಿಳಿಸಲಿ? ನನ್ನ ಜೀವನ ಸಾಮಾನ್ಯ ಸ್ಥಿತಿಗೆ ಬರಲಾರದಷ್ಟುಅತ್ಯಂತ ಕೆಟ್ಟದಾಗಿ ಬದಲಾಗಿದೆ.

ಆಪಲ್ ಫೋನ್ ನಿಂದ ನಾನು ಸಲಿಂಗಕಾಮಕ್ಕೆ ತುತ್ತಾದೆ. ಇದರಿಂದಾಗಿ ನೈತಿಕ ಹಾಗೂ ಮಾನಸಿಕ ಹಾನಿ ಉಂಟಾಗಿದೆ ಎಂದು ಆರೋಪಿಸಿದ್ದಾನೆ.

Source:-kannadaprabha

ಸಂಬಂಧಿತ ಪೋಸ್ಟ್ಗಳು

ಚೀನಾದಲ್ಲಿ ಭೂ ಕುಸಿತ: ಸಾವನ್ನಪ್ಪಿದವರ ಸಂಖ್ಯೆ 15ಕ್ಕೇರಿಕೆ

Ansar Aziz Nadwi

ಇದು ಗ್ರಾಫಿಕ್ಸ್ ಅಲ್ಲ, ನಿಜ: 7 ಅಡಿ ಎತ್ತರದ ಬೇಲಿ ದಾಟಿದ ಮೊಸಳೆ,

Ansar Aziz Nadwi

ಪಾಕ್‍ನಿಂದ ಮತ್ತೆ ಕದನ ವಿರಾಮ ಉಲ್ಲಂಘನೆ ಓರ್ವ ಸೈನಿಕ ಹುತಾತ್ಮ

Ansar Aziz Nadwi

ಒಂದು ಕಾಮೆಂಟ್ ಬಿಡಿ

ವಿಮರ್ಶೆ ಬಿಡಿ