ಟೆಕ್ ಸುದ್ದಿ ರಾಷ್ಟ್ರೀಯ

ಜಿಯೋ ದೀಪಾವಳಿ ಆಫರ್ – 699 ರೂ.ಗೆ ಜಿಯೋ ಫೋನ್, 700 ರೂ. ಡೇಟಾ ಉಚಿತ

ಮುಂಬೈ:(ಸೀಧಿಬಾತ್ ನ್ಯೂಸ್ ಸರ್ವಿಸ್) ದಸರಾ, ದೀಪಾವಳಿ ಹಬ್ಬದ ಸಂಭ್ರಮಕ್ಕೆ ಜಿಯೋ ತನ್ನ 4ಜಿ ಎಲ್‍ಟಿಇ ಫೋನಿನ ಬೆಲೆಯನ್ನು 800 ರೂ. ಕಡಿತಗೊಳಿಸಿದೆ.

ಹೌದು. ಇಲ್ಲಿಯವರೆಗೆ ಜಿಯೋ ತನ್ನ ಫೋನನ್ನು 1500 ರೂ.ಗೆ ಮಾರಾಟ ಮಾಡುತಿತ್ತು. ಈ ಫೋನ್ ಈ ದರದಲ್ಲಿ ಸಿಗಬೇಕಾದರೆ ಹಳೆ ಫೋನ್ ಬದಲಾಯಿಸಬೇಕಿತ್ತು. ಆದರೆ ಈಗ ಹಳೆ ಫೋನ್ ಬದಲಾಯಿಸದೇ 699 ರೂ.ಗೆ ಹೊಸ ಫೋನ್ ಖರೀದಿಸಬಹುದಾಗಿದೆ.

ಇದರ ಜೊತೆ ಜಿಯೋ 700 ರೂ. ಡೇಟಾವನ್ನು ಉಚಿತವಾಗಿ ನೀಡಲಿದೆ. ಮೊದಲ 7 ರಿಚಾರ್ಜ್ ವೇಳೆ ಜಿಯೋ ಉಚಿತವಾಗಿ 99 ರೂ. ಡೇಟಾವನ್ನು ನೀಡಲಿದೆ. ಈ ಆಫರ್ ದಸರಾದಿಂದ ದೀಪಾವಳಿಯವರೆಗೆ ಮಾತ್ರ ಇರಲಿದೆ ಎಂದು ಜಿಯೋ ಹೇಳಿದೆ.

ಭಾರತದಲ್ಲಿ 2ಜಿ ಫೋನ್‍ಗಳ ಪೈಕಿ ಅತ್ಯಂತ ಕಡಿಮೆ ದರದಲ್ಲಿ ಈ ಫೋನ್ ಈಗ ಸಿಗುತ್ತಿದೆ. ಎಚ್‍ಡಿ ವಾಯ್ಸ್ ಕಾಲ್ ಜೊತೆ ಜಿಯೋ ಫೋನಿನಲ್ಲಿ ವಿಡಿಯೋ ಕಾಲ್ ಮಾಡಬಹುದಾಗಿದೆ. ಫೋನ್ ಬಾಕ್ಸ್ ನಲ್ಲಿ ಹ್ಯಾಂಡ್ ಸೆಟ್, ತೆಗೆಯಲು ಸಾಧ್ಯವಿರುವ ಬ್ಯಾಟರಿ, ಚಾರ್ಜರ್ ಅಡಾಪ್ಟರ್, ಜಿಯೋ ಸಿಮ್ ಕಾರ್ಡ್ ಇರಲಿದೆ.

ಕನ್ನಡ ಸೇರಿದಂತೆ ಒಟ್ಟು 22 ಭಾಷೆಗಳಿಗೆ ಜಿಯೋ ಫೋನ್ ಬೆಂಬಲ ನೀಡುತ್ತಿದ್ದು  ಮೈ ಜಿಯೋ, ಜಿಯೋ ಸಾವನ್, ಜಿಯೋ ಟಿವಿ, ಜಿಯೋ ಸಿನಿಮಾ, ಜಿಯೋ ಎಕ್ಸ್ ಪ್ರೆಸ್ ನ್ಯೂಸ್, ಜಿಯೋ ವಿಡಿಯೋ ಕಆಲ್, ಜಿಯೋ ಶೇರ್, ಜಿಯೋ ಗೇಮ್ಸ್ ಅಪ್ಲಿಕೇಶನ್ ಬಳಸಬಹುದು. ಸೇವೆ ಆರಂಭಗೊಂಡ ಬಳಿಕ 7 ಕೋಟಿ 2ಜಿ ಬಳಕೆದಾರರು ಜಿಯೋ ಫೋನ್ ಖರೀದಿಸಿದ್ದಾರೆ.

ಫೋನಿನ ಗುಣ ವೈಶಿಷ್ಟ್ಯಗಳು:
2.4 ಇಂಚಿನ ಕ್ಯುವಿಜಿಎ ಟಿಎಫ್‍ಟಿ ಸ್ಕ್ರೀನ್(320*240 ಪಿಕ್ಸೆಲ್), 1.2 ಗಿಗಾಹಟ್ರ್ಸ್ ಡ್ಯುಯಲ್ ಕೋರ್ ಪ್ರೊಸೆಸರ್, 512 ಎಂಬಿ ರ‍್ಯಾಮ್, 4ಜಿಬಿ ಆಂತರಿಕ ಮೆಮೊರಿ, 128 ಜಿಬಿವರೆಗೆ ಮೆಮೊರಿ ವಿಸ್ತರಣೆ, 4ಜಿ ವೋಲ್ಟ್, ಜಿಪಿಎಸ್/ಎನ್‍ಎಫ್‍ಸಿ, ಹಿಂದುಗಡೆ 2 ಎಂಪಿ, ಮುಂದುಗಡೆ 0.3 ಎಂಪಿ ಕ್ಯಾಮೆರಾ, ಯುಎಸ್‍ಬಿ 2.0, 2000 ಎಂಎಎಚ್ ಬ್ಯಾಟರಿ.

Source:-publictv

ಸಂಬಂಧಿತ ಪೋಸ್ಟ್ಗಳು

ಉತ್ತರ ಪ್ರದೇಶ: ಪ್ರತ್ಯೇಕ ಶೂಟೌಟ್ ಪ್ರಕರಣಗಳಲ್ಲಿ ಎಸ್ ಪಿ ,ವಿಹೆಚ್ ಪಿ ಮುಖಂಡನ ಹತ್ಯೆ

Ansar Aziz Nadwi

7 ದಿನಗಳಲ್ಲಿ ಬಂಗಲೆಗಳಿಂದ ಹೊರ ನಡೆಯಲು 200 ಮಾಜಿ ಸಂಸದರಿಗೆ ಆದೇಶ

Ansar Aziz Nadwi

ವಿದ್ಯಾರ್ಥಿನಿಯನ್ನು ಅಪಹರಿಸಿ ಚಲಿಸುತ್ತಿದ್ದ ಕಾರಿನಲ್ಲಿ ಸಾಮೂಹಿಕ ಅತ್ಯಾಚಾರ

Ansar Aziz Nadwi

ಒಂದು ಕಾಮೆಂಟ್ ಬಿಡಿ

ವಿಮರ್ಶೆ ಬಿಡಿ