ಅಂತಾರಾಷ್ಟ್ರೀಯ

ಮೂವರು ಸಾಧಕರಿಗೆ ವೈದ್ಯಕೀಯ ನೋಬೆಲ್ ಗೌರವ

(ಸೀಧಿಬಾತ್ ನ್ಯೂಸ್ ಸರ್ವಿಸ್):

ವೈದ್ಯಕೀಯ ಶಾಸ್ತ್ರಕ್ಕಾಗಿನ 2019 ರ ನೊಬೆಲ್ ಪ್ರಶಸ್ತಿ ಘೋಷಣೆಯಾಗಿದ್ದು ವಿಲಿಯಂ ಜಿ ಕೈಲಿನ್ ಜೂನಿಯರ್, ಸರ್ ಪೀಟರ್ ಜೆ ರಾಟ್‌ಕ್ಲಿಫ್ ಮತ್ತು ಗ್ರೆಗ್ ಎಲ್ ಸೆಮೆನ್ಜಾ ಅವರುಗಳು ಪ್ರತಿಷ್ಠಿತ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಜೀವಕೋಶಗಳು ಹೇಗೆ ಗ್ರಹಿಸುತ್ತವೆ ಹಾಗೂ ಹೇಗೆ ಆಮ್ಲಜನಕದ ಲಭ್ಯತೆಗೆ ಹೊಂದಿಕೊಳ್ಳುತ್ತವೆ ಎಂಬ ಆವಿಷ್ಕಾರಕ್ಕಾಗಿ ಈ ಪ್ರಶಸ್ತಿ ನೀಡಲಾಗಿದೆ.

ಜೀವಕೋಶಗಳು ಆಮ್ಲಜನಕದ ಲಭ್ಯತೆಯನ್ನು ಹೇಗೆ ಗ್ರಹಿಸುತ್ತವೆ ಮತ್ತು ಅದಕ್ಕೆ ಹೇಗೆ ಹೊಂದಿಕೊಳ್ಳುತ್ತವೆ ಎಂಬುದನ್ನು ಸಂಶೋಧಕರು ಪರಿಶೀಲಿಸಿ ಕಂಡುಕೊಂಡಿದ್ದಾರೆ. “ಆಮ್ಲಜನಕದ ಮೂಲಭೂತ ಪ್ರಾಮುಖ್ಯತೆಯನ್ನು ಶತಮಾನಗಳಿಂದ ಅರ್ಥಮಾಡಿಕೊಳ್ಳಲಾಗಿದೆ, ಆದರೆ ಜೀವಕೋಶಗಳು ಆಮ್ಲಜನಕದ ಮಟ್ಟದಲ್ಲಿನ ಬದಲಾವಣೆಗಳಿಗೆ ಹೇಗೆ ಹೊಂದಿಕೊಳ್ಳುತ್ತವೆ ಎಂಬುದು ಬಹುಕಾಲದಿಂದ ಇದ್ದ ಪ್ರಶ್ನೆಯಾಗಿತ್ತು. ಈ ವರ್ಷದ ನೊಬೆಲ್ ಪ್ರಶಸ್ತಿ ಪುರಸ್ಕೃತರು ಈ ಕುರಿತಂತೆ ಉತ್ತರ ಹುಡುಕಿದ್ದಾರೆ. ಆಮ್ಲಜನಕ ಪೂರೈಕೆಯಲ್ಲಿನ ವ್ಯತ್ಯಾಸಗಳಿಗೆ ಜೀವಕೋಶಗಳು ಹೇಗೆ ಹೊಂದಿಕೊಳ್ಳುತ್ತವೆ ಎಂಬುದನ್ನು ಅವರು ವಿವರಿಸುವಲ್ಲಿ ಸಫಲವಾಗಿದ್ದಾರೆ”ನೊಬೆಲ್ ಪ್ರಶಸ್ತಿ ವಿಜೇತರ ಸಂಶೋಧನೆ ಕುರಿತ ವಿವರಣೆ ಹೇಳಿದೆ.

ಆಮ್ಲಜನಕ ಸಂವೇದನೆಯು ಹೆಚ್ಚಿನ ಸಂಖ್ಯೆಯ ರೋಗಗಳಿ ಮೂಲ ಕಾರಣವಾಗಿದೆ./ಈ ಸಾಲಿನ ನೊಬೆಲ್ ವಿಜೇತರು ನಡೆಸಿರುವ ಸಂಶೋಧನೆ ರೀರ ವಿಜ್ಞಾನಕ್ಕೆ ಮೂಲಭೂತ ಪ್ರಾಮುಖ್ಯತೆಯನ್ನು ಖಚಿತಪಡಿಸಿದೆ. ರಕ್ತಹೀನತೆ, ಕ್ಯಾನ್ಸರ್ ಮತ್ತು ಇತರ ಅನೇಕ ಕಾಯಿಲೆಗಳ ವಿರುದ್ಧ ಹೋರಾಡಲು ಹೊಸ ತಂತ್ರಗಳ ಅನುಸರಿಸುವಿಕೆಗೆ  ದಾರಿ ಮಾಡಿಕೊಟ್ಟಿದೆ.

Source:-kannadaprabha

ಸಂಬಂಧಿತ ಪೋಸ್ಟ್ಗಳು

ಚೀನಾದಲ್ಲಿ ಭಾರಿ ಮಳೆ: ಪ್ರವಾಸಿಗರಿಗೆ ‘ಮೌಂಟ್ ಹುವಾಶಾನ್’ ಬಂದ್

Ansar Aziz Nadwi

ಇದು ಗ್ರಾಫಿಕ್ಸ್ ಅಲ್ಲ, ನಿಜ: 7 ಅಡಿ ಎತ್ತರದ ಬೇಲಿ ದಾಟಿದ ಮೊಸಳೆ,

Ansar Aziz Nadwi

ಕ್ಯಾಲಿಫೋರ್ನಿಯಾ ಆಹಾರ ಮೇಳದಲ್ಲಿ ಗುಂಡಿನ ದಾಳಿ: ಮೂವರು ಸಾವು, 12 ಮಂದಿಗೆ ಗಾಯ

Ansar Aziz Nadwi

ಒಂದು ಕಾಮೆಂಟ್ ಬಿಡಿ

ವಿಮರ್ಶೆ ಬಿಡಿ