ರಾಷ್ಟ್ರೀಯ ರಾಷ್ಟ್ರೀಯ ಸುದ್ದಿ

ಮನಾಲಿ-ಲೇಹ್ ರಸ್ತೆಯಲ್ಲಿ ಭಾರೀ ಹಿಮಪಾತ, ಸೇನಾ ಟ್ರಕ್ಸ್, ನೂರಾರು ಪ್ರವಾಸಿಗರ ಪರದಾಟ

ಹಿಮಾಚಲ ಪ್ರದೇಶ:(ಸೀಧಿಬಾತ್ ನ್ಯೂಸ್ ಸರ್ವಿಸ್) ಮನಾಲಿ-ಲೇಹ್ ರಸ್ತೆಯ ಮೇಲೆ ಭಾರೀ ಹಿಮದ ರಾಶಿ ಬಿದ್ದ ಪರಿಣಾಮ ಸುಮಾರು 150ಕ್ಕೂ ಅಧಿಕ ವಾಹನಗಳು ರೋಹ್ಟಂಗ್ ಪಾಸ್ ನಲ್ಲಿ ನಿಂತಿದ್ದು, ಈವರೆಗೆ 200ಕ್ಕೂ ಅಧಿಕ ಪ್ರವಾಸಿಗರನ್ನು ರೋಹ್ಟಂಗ್ ರಕ್ಷಣಾ ತಂಡ ಮತ್ತು ಜಿಲ್ಲಾಡಳಿತ, ಪೊಲೀಸರು ಜಂಟಿಯಾಗಿ ರಕ್ಷಿಸಿರುವುದಾಗಿ ವರದಿ ತಿಳಿಸಿದೆ.

ಕಳೆದ ಎರಡು ದಿನಗಳಿಂದ ಮನಾಲಿ, ಲೇಹ್ ನಲ್ಲಿ ನಿರಂತರವಾಗಿ ಹಿಮಪಾತವಾಗುತ್ತಿದ್ದು, ಸೇನಾ ವಾಹನ ಸೇರಿದಂತೆ ನೂರಾರು ಪ್ರವಾಸಿಗರು ರಸ್ತೆ ಮಧ್ಯೆಯೇ ಸಿಲುಕಿಕೊಂಡು ಪರದಾಡುವಂತಾಗಿದೆ. ಈ ನಿಟ್ಟಿನಲ್ಲಿ ಆಧುನಿಕ ಹಿಟಾಚಿ ಯಂತ್ರಗಳ ಸಹಾಯದೊಂದಿಗೆ ಹಿಮದ ರಾಶಿ ತೆರವುಗೊಳಿಸಲಾಗುತ್ತಿದೆ ಎಂದು ವರದಿ ವಿವರಿಸಿದೆ.

ಸೇನಾ ಟ್ರಕ್ಸ್, ಪ್ರವಾಸಿಗರ ವಾಹನ ಹಿಮದ ರಾಶಿಯಲ್ಲಿ ಹುದುಗಿದ್ದು ಅವುಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಬಿರುಸಿನಿಂದ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಮನಾಲಿ, ಲೇಹ್ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಎಡೆಬಿಡದೆ ಸುರಿಯುತ್ತಿರುವ ಹಿಮಪಾತದಿಂದಾಗಿ ರಾಜ್ಯಾದ್ಯಂತ ಸಂಚಾರ ದಟ್ಟಣೆ ಹೆಚ್ಚಾಗಿದ್ದು ವಾಹನ ಸವಾರರು ಪರದಾಡುವಂತಾಗಿದೆ. ಅಲ್ಲದೇ ಕೇಲಾಂಗ್ ಮನಾಲಿ ಪ್ರದೇಶದ ಬಸ್ ಸಂಚಾರವನ್ನು ಸೋಮವಾರ ರದ್ದುಗೊಳಿಸಲಾಗಿದೆ. ಯಾವುದೇ ಕಾರಣಕ್ಕೂ ಪ್ರವಾಸಿಗರು, ಜನರು ರೋಹ್ಟಂಗ್ ಪಾಸ್ ದಾರಿಯಲ್ಲಿ ಸಂಚರಿಸದಂತೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.

Source:-udayavani

ಸಂಬಂಧಿತ ಪೋಸ್ಟ್ಗಳು

INX ಭ್ರಷ್ಟಾಚಾರ ಪ್ರಕರಣ; ತಿಹಾರ್ ಜೈಲಿನಲ್ಲಿ ಇ.ಡಿ ವಿಚಾರಣೆ ಬಳಿಕ ಚಿದಂಬರಂ ಬಂಧನ

Ansar Aziz Nadwi

ತೀವ್ರ ಜ್ವರದಿಂದ ಬಳಲುತ್ತಿರುವ ಡಿಕೆಶಿ: ಮತ್ತೆ ಆಸ್ಪತ್ರೆಗೆ ದಾಖಲು

Ansar Aziz Nadwi

ಸಿಂಗ್‌, ಸೋನಿಯಾ ಭೇಟಿಯಾದ ಹಸೀನಾ

Ansar Aziz Nadwi

ಒಂದು ಕಾಮೆಂಟ್ ಬಿಡಿ

ವಿಮರ್ಶೆ ಬಿಡಿ