ರಾಷ್ಟ್ರೀಯ ರಾಷ್ಟ್ರೀಯ ಸುದ್ದಿ

20 ಉಗ್ರ ಶಿಬಿರಗಳು ಸಕ್ರಿಯ

ಹೊಸದಿಲ್ಲಿ:(ಸೀಧಿಬಾತ್ ನ್ಯೂಸ್ ಸರ್ವಿಸ್) ಭಾರತದೊಳಕ್ಕೆ ಉಗ್ರರನ್ನು ನುಸುಳಿಸಲು ಪಣತೊಟ್ಟಿರುವ ಪಾಕಿಸ್ಥಾನವು ತನ್ನ ಪ್ರಯತ್ನವನ್ನು ಮುಂದುವರಿಸಿದೆ. ಗಡಿ ನಿಯಂತ್ರಣ ರೇಖೆಯಾದ್ಯಂತ ಪಾಕಿಸ್ಥಾನವು ಕನಿಷ್ಠ 20 ಉಗ್ರ ಶಿಬಿರಗಳನ್ನು ಹಾಗೂ 20 ಲಾಂಚ್‌ ಪ್ಯಾಡ್‌ಗಳನ್ನು ಸಕ್ರಿಯಗೊಳಿಸಿದೆ ಎಂದು ಗುಪ್ತಚರ ಮಾಹಿತಿ ಆಧರಿಸಿ ಅಧಿಕಾರಿಗಳು ತಿಳಿಸಿದ್ದಾರೆ.

ಉಗ್ರರ ತರಬೇತಿ ಶಿಬಿರಗಳು ಮತ್ತು ಲಾಂಚ್‌ ಪ್ಯಾಡ್‌ಗಳಲ್ಲಿ ಕನಿಷ್ಠಪಕ್ಷ ತಲಾ 50 ಉಗ್ರರಿದ್ದಾರೆ. ಫೆಬ್ರವರಿಯಲ್ಲಿ ಪುಲ್ವಾಮಾ ದಾಳಿ ಆದ ಬಳಿಕ ಈ ಶಿಬಿರಗಳನ್ನು ದಿಢೀರನೆ ಮುಚ್ಚಲಾಗಿತ್ತು. ಈಗ ಮತ್ತೆ ಇವನ್ನು ಸಕ್ರಿಯ ಗೊಳಿಸಲಾಗಿದೆ ಎಂಬ ಮಾಹಿತಿ ದೊರೆತಿದೆ. ಜಮ್ಮು ಮತ್ತು ಕಾಶ್ಮೀರ ಸೇರಿದಂತೆ ದೇಶದ ವಿವಿಧೆಡೆ ವಿಧ್ವಂಸಕ ಕೃತ್ಯವೆಸಗಲೆಂದು ಉಗ್ರರನ್ನು ನುಸುಳಿಸುವ ಉದ್ದೇಶದಿಂದ ಇವುಗಳಿಗೆ ಮತ್ತೆ ಜೀವ ನೀಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಮತ್ತೆ ಡ್ರೋನ್‌ ಪ್ರತ್ಯಕ್ಷ
ಪಂಜಾಬ್‌ನ ಹುಸೈನ್‌ವಾಲಾ ಪ್ರದೇಶದಲ್ಲಿ ಪಾಕಿಸ್ಥಾನದ ಕಡೆಯಿಂದ ಎರಡು ಡ್ರೋನ್‌ಗಳು ಗಡಿ ದಾಟಿ ಬಂದಿದ್ದು ಮಂಗಳವಾರ ಕಂಡುಬಂದಿದೆ. ರಾಜ್ಯದ ಗಡಿ ಭಾಗಗಳಲ್ಲಿ ಶಸ್ತ್ರಾಸ್ತ್ರಗಳನ್ನು ಹೊತ್ತು ತರುತ್ತಿದ್ದ ಡ್ರೋನ್‌ಗಳನ್ನು ಬಿಎಸ್‌ಎಫ್ ಪತ್ತೆಹಚ್ಚಿದ ಬೆನ್ನಲ್ಲೇ ಈ ಘಟನೆ ನಡೆದಿದೆ. ಮಂಗಳವಾರ ಗಡಿ ದಾಟಿ ಬಂದಿದೆ ಎನ್ನಲಾದ ಡ್ರೋನ್‌ಗಾಗಿ ಶೋಧ ಕಾರ್ಯ ಬಿರುಸುಗೊಳಿಸಲಾಗಿದೆ.

Source:-udayavani

ಸಂಬಂಧಿತ ಪೋಸ್ಟ್ಗಳು

ರೈತರ ಆಯೋಗಕ್ಕೆ ಅಸ್ತು

Ansar Aziz Nadwi

ಕರ್ನಾಟಕ ಸೇರಿ 16 ರಾಜ್ಯದ 600 ಮಹಿಳೆಯರ ನಗ್ನ ವೀಡಿಯೋ ಸೆರೆಹಿಡಿದ ಟೆಕ್ಕಿ ಪೊಲೀಸರ ಬಲೆಗೆ

Ansar Aziz Nadwi

370ನೇ ವಿಧಿ ರದ್ದು ಬಗ್ಗೆ ಕಿಡಿಕಾರಿದ್ದ ಫೈಸಲ್ ದೆಹಲಿಯಲ್ಲಿ ಪೊಲೀಸ್ ವಶಕ್ಕೆ, ಗೃಹಬಂಧನ

Ansar Aziz Nadwi

ಒಂದು ಕಾಮೆಂಟ್ ಬಿಡಿ

ವಿಮರ್ಶೆ ಬಿಡಿ