ರಾಷ್ಟ್ರೀಯ ರಾಷ್ಟ್ರೀಯ ಸುದ್ದಿ

ಮತದಾರರ ಗುರುತಿನ ಚೀಟಿಗೆ ಆಧಾರ್‌ ಲಿಂಕ್‌?

ಹೊಸದಿಲ್ಲಿ:(ಸೀಧಿಬಾತ್ ನ್ಯೂಸ್ ಸರ್ವಿಸ್) ಮತದಾರರ ಗುರುತಿನ ಚೀಟಿಗಳಿಗೆ ಹೊಸದಾಗಿ ಅರ್ಜಿ ಸಲ್ಲಿಸುವವರಿಗೆ ಹಾಗೂ ಈಗಾಗಲೇ ಗುರುತಿನ ಚೀಟಿ ಹೊಂದಿರುವವರಿಗೆ ಆಧಾರ್‌ ಸಂಖ್ಯೆಯನ್ನು ಕಡ್ಡಾಯಗೊಳಿಸುವ ವಿಚಾರವನ್ನು ಪರಿಶೀಲಿಸಲಾಗುತ್ತಿದೆ ಎಂದು ಕೇಂದ್ರ ಕಾನೂನು ಸಚಿವಾಲಯ ತಿಳಿಸಿವೆ.

ರಾಷ್ಟ್ರೀಯ ಮತದಾರರ ಪಟ್ಟಿ ಶುದ್ಧೀಕರಣ ಹಾಗೂ ದೃಢೀಕೃತ ಮತದಾರರ ಪಟ್ಟಿ ಸಿದ್ಧಪಡಿಸುವ ಯೋಜನೆಯಡಿ (ಎನ್‌ಇಆರ್‌ಪಿಎಪಿ) ಆಧಾರ್‌ ಕಡ್ಡಾಯ ಗೊಳಿಸಲು ಆಯೋಗ ಯೋಜಿಸಿದೆ. ಹಾಗಾಗಿ ಆಧಾರ್‌ ಕಡ್ಡಾಯಗೊಳಿಸಲು ತನಗೆ ಕಾನೂ ನಾತ್ಮಕ ಅವಕಾಶ ನೀಡ ಬೇಕೆಂದು ಕೋರಿ ಚುನಾವಣ ಆಯೋಗ (ಇ.ಸಿ.) ಕಾನೂನು ಸಚಿವಾಲಯಕ್ಕೆ ಪತ್ರದ ಮೂಲಕ ಮನವಿ ಮಾಡಿದೆ. ಅದಕ್ಕೆ ಪೂರಕವಾಗಿ ಜನಪ್ರತಿನಿಧಿ ಕಾಯ್ದೆಗೆ ತಿದ್ದುಪಡಿ ತರುವಂತೆ ಸಚಿವಾಲಯಕ್ಕೆ ಆಯೋಗ ಕೋರಿದೆ.

Source:-udayavani

ಸಂಬಂಧಿತ ಪೋಸ್ಟ್ಗಳು

ಬೆದರಿಕೆಗೆ ಬಗ್ಗದಿರಿ; ಸಹಜತೆಗೆ ಮರಳಿ

Ansar Aziz Nadwi

7 ದಿನಗಳಲ್ಲಿ ಬಂಗಲೆಗಳಿಂದ ಹೊರ ನಡೆಯಲು 200 ಮಾಜಿ ಸಂಸದರಿಗೆ ಆದೇಶ

Ansar Aziz Nadwi

ಸೆಲ್ಫಿ ಗೀಳಿಗೆ ಒಂದೇ ಕುಟುಂಬದ ನಾಲ್ವರು ಬಲಿ

Ansar Aziz Nadwi

ಒಂದು ಕಾಮೆಂಟ್ ಬಿಡಿ

ವಿಮರ್ಶೆ ಬಿಡಿ