ರಾಷ್ಟ್ರೀಯ ರಾಷ್ಟ್ರೀಯ ಸುದ್ದಿ

ನಾನು ಪಾಕ್ ಪರವಾಗಿದ್ದರೆ ನನಗೆ ಪದ್ಮ ವಿಭೂಷಣ ಕೊಟ್ಟಿದ್ಯಾಕೆ: ಶರದ್ ಪವಾರ್

ಮುಂಬೈ:(ಸೀಧಿಬಾತ್ ನ್ಯೂಸ್ ಸರ್ವಿಸ್) ಪ್ರದಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸರಕಾರದ ವಿರುದ್ಧ ಎನ್ ಸಿಪಿ ನಾಯಕ ಶರದ್ ಪವಾರ್ ಮತ್ತೆ ಕಿಡಿಕಾರಿದ್ದು, ಒಂದು ವೇಳೆ ನಾನು ಪಾಕಿಸ್ಥಾನದ ಪರವಾಗಿದ್ದರೆ ಕೇಂದ್ರ ಸರಕಾರ ನನಗೆ ಪದ್ಮ ವಿಭೂಷಣ ಕೊಟ್ಟಿದ್ಯಾಕೆ ಎಂದು ಕಿಡಿಕಾರಿದ್ದಾರೆ.

ಶರದ್ ಪವರ್ ಇತ್ತೀಚೆಗೆ ಪಾಕಿಸ್ಥಾನದಲ್ಲಿ ತನಗೆ ಉತ್ತಮ ಆತಿಥ್ಯ ಸಿಕ್ಕಿದೆ. ಕೆಂದ್ರ ಸರಕಾರ ಹೇಳುವ ಹಾಗೆ ಕೆಟ್ಟ ಪರಿಸ್ಥಿತಿ ಪಾಕಿಸ್ಥಾನದಲ್ಲಿಲ್ಲ ಎಂದು ಹೇಳಿಕೆ ನೀಡಿದ್ದರು. ಕೆಲ ದಿನಗಳ ಹಿಂದೆ ಮಹಾರಾಷ್ಟ್ರಕ್ಕೆ ಭೇಟಿ ನಿಡಿದ್ದ ಪ್ರಧಾನಿ ನರೇಂದ್ರ ಮೋದಿ ಇದೇ ವಿಷಯದಲ್ಲಿ ಪವಾರ್ ವಿರುದ್ಧ ವಾಗ್ದಾಳಿ ನಡೆಸಿದ್ದರು.

ಮಾಧ್ಯಮವೊಂದಕ್ಕೆ ಮಾತನಾಡಿದ ಹಿರಿಯ ರಾಜಕಾರಣಿ ಶರದ್ ಪವಾರ್, ಪ್ರಧಾನ ಮಂತ್ರಿಯವರಿಗೆ ಖಚಿತ ಮಾಹಿತಿ ಕೊಡುವವರು ಇದ್ದಾರೆ. ಆದರೆ ನಾನು ಏನು ಹೇಳಿದ್ದೆ ಎಂದು ಅವರಿಗೆ ಖಚಿತವಾಗಿ ಯಾರೂ ಹೇಳಿಲ್ಲವೇ? ನನ್ನ ಹಿತಾಸಕ್ತಿಗಳು ಪಾಕ್ ಪರವಾಗಿ ಇದ್ದರೆ, ನಾನು ಭಾರತದ ವಿರುದ್ಧವಾಗಿದ್ದರೆ ಕೇಂದ್ರ ಸರಕಾರ ನನಗೆ ಏಕೆ ಪದ್ಮ ವಿಭೂಷಣ ಗೌರವ ನೀಡಿದೆ ಎಂದರು.

Source:-udayavani

ಸಂಬಂಧಿತ ಪೋಸ್ಟ್ಗಳು

ಸಾಕಾರಗೊಂಡ ಸರ್ದಾರ್‌ ಪಟೇಲ್‌ ಕನಸು

Ansar Aziz Nadwi

ಪಿ.ಎಂ.ಸಿ. ಬ್ಯಾಂಕಿನ ಇನ್ನೋರ್ವ ಖಾತೆದಾರ ಹೃದಯಾಘಾತಕ್ಕೆ ಬಲಿ

Ansar Aziz Nadwi

ಲಾಲು ಪ್ರಸಾದ್‌ ಯಾದವ್‌ಗೆ ಜಾಮೀನು ಮಂಜೂರು ಮಾಡಿದ ಜಾರ್ಖಂಡ್‌ ಹೈಕೋರ್ಟ್‌

Ansar Aziz Nadwi

ಒಂದು ಕಾಮೆಂಟ್ ಬಿಡಿ

ವಿಮರ್ಶೆ ಬಿಡಿ