ಅಪರಾಧ ಕರ್ನಾಟಕ ಕರ್ನಾಟಕ / ಕೋಸ್ಟಲ್

ಚಾಮರಾಜನಗರದಲ್ಲಿ ಮತ್ತೆ ನರಭಕ್ಷಕ ಪತ್ತೆ- ಹಸುವನ್ನು ಹೊತ್ತೊಯ್ದ ಹುಲಿರಾಯ

ಚಾಮರಾಜನಗರ:(ಸೀಧಿಬಾತ್ ನ್ಯೂಸ್ ಸರ್ವಿಸ್) ಕಾಡಂಚಿನ ಗ್ರಾಮದಲ್ಲಿ ಹುಲಿಯ ಸಂಚಾರ ಗ್ರಾಮಸ್ಥರನ್ನು ಮತ್ತಷ್ಟು ಆತಂಕಕ್ಕೀಡು ಮಾಡಿದೆ.

ಹುಲಿ ದಾಳಿಗೆ ಹಸು ಬಲಿಯಾಗಿದ್ದು, ಗ್ರಾಮಸ್ಥರನ್ನು ಚಿಂತೆಗೀಡು ಮಾಡಿದೆ. ಬಂಡೀಪುರ ಅರಣ್ಯ ವ್ಯಾಪ್ತಿಯ ಗುಂಡ್ಲುಪೇಟೆ ತಾಲೂಕಿನ ಚೌಡಹಳ್ಳಿ ಬಳಿಯ ಮೂರ್ಕಲ್ಲು ಗುಡ್ಡದ ಬಳಿ ಹುಲಿ ದಾಳಿಗೆ ಹಸು ಬಲಿಯಾಗಿದೆ.

ಮಂಗಳವಾರವಷ್ಟೇ ಹಸು ಮೇಯಿಸಲು ಹೋಗಿದ್ದ ಚೌಡಹಳ್ಳಿ ಗ್ರಾಮದ ರೈತ ಶಿವಲಿಂಗಪ್ಪನನ್ನು ಹುಲಿ ತಿಂದು ಹಾಕಿತ್ತು. ಇದರಿಂದ ಭಯಗೊಂಡ ಗ್ರಾಮಸ್ಥರು ಹುಲಿ ಸೆರೆಹಿಡಿಯುವಂತೆ ಪ್ರತಿಭಟನೆ ಮಾಡಿದ್ರು. ಗ್ರಾಮಸ್ಥರ ಪ್ರತಿಭಟನೆಗೆ ಮಣಿದ ಅರಣ್ಯ ಇಲಾಖೆಯ ಎಪಿಸಿಸಿಎಫ್ ಜಗತ್ ರಾಂ ಹುಲಿಯ ಶೂಟೌಟ್ ಗೆ ಆದೇಶ ಹೊರಡಿಸಿದ್ರು. ಹುಲಿ ಶೂಟೌಟ್ ಆದೇಶ ನೀಡಿದ ಬೆನ್ನಲ್ಲೇ ವನ್ಯ ಪ್ರಿಯರು ಟ್ವಿಟ್ಟರ್ ಮೂಲಕ ತಮ್ಮ ಆಕ್ರೋಶ ಹೊರಹಾಕಿದ್ದಾರೆ.

ಇದೀಗ ಮತ್ತೆ ಹುಲಿರಾಯನ ದಾಳಿಗೆ ಹಸು ಬಲಿಯಾಗಿರುವುದರಿಂದ ಗ್ರಾಮದಲ್ಲಿ ಮತ್ತಷ್ಟು ಆತಂಕ ಮನೆಮಾಡಿದ್ದು, ಜಮೀನಿನ ಬಳಿ ತೆರಳಲು ಗ್ರಾಮಸ್ಥರು ಆತಂಕ ಪಡುವ ಪರಿಸ್ಥಿತಿ ನಿರ್ಮಾಣವಾಗಿದೆ.

Source:-publictv

ಸಂಬಂಧಿತ ಪೋಸ್ಟ್ಗಳು

ಬೆಂಗ್ಳೂರು ದರೋಡೆ ಪ್ರಕರಣಕ್ಕೆ ಟ್ವಿಸ್ಟ್ – ಹ್ಯಾಪಿ ಎಂಡಿಂಗ್‍ಗೆ ಬಂದವರಿಂದಲೇ ಮಹಿಳೆಗೆ ಚಾಕು ಇರಿತ

Ansar Aziz Nadwi

ಕಿಸಾನ್ ಸಮ್ಮಾನ್ ಯೋಜನೆ : ರಾಜ್ಯದ ಪ್ರಥಮ ಕಂತು ರೈತರ ಖಾತೆಗೆ

Ansar Aziz Nadwi

ಭೈರಪ್ಪರಿಂದ ಈ ಬಾರಿ ದಸರಾ ಉದ್ಘಾಟನೆ

Ansar Aziz Nadwi

ಒಂದು ಕಾಮೆಂಟ್ ಬಿಡಿ

ವಿಮರ್ಶೆ ಬಿಡಿ