ಅಂತಾರಾಷ್ಟ್ರೀಯ

“ಲೀಥಿಯಂ-ಅಯಾನ್‌ ಬ್ಯಾಟರಿ’ ಕರ್ತೃವಿಗೆ ನೊಬೆಲ್‌ ಗೌರವ

ಸ್ಟಾಕ್‌ಹೋಂ (ಸ್ವೀಡನ್‌):(ಸೀಧಿಬಾತ್ ನ್ಯೂಸ್ ಸರ್ವಿಸ್) ಎಲೆಕ್ಟ್ರಾನಿಕ್‌ ಉಪ ಕರಣಗಳಲ್ಲಿ ಬಳಸುವ “ಲೀಥಿಯಂ- ಅಯಾನ್‌ ಬ್ಯಾಟರಿ’ಯನ್ನು ಪರಿಚಯಿಸಿದ ಅಮೆರಿಕದ ವಿಜ್ಞಾನಿ ಜಾನ್‌ ಗುಡ್‌ಎನಫ್ (97) ಅವರನ್ನು ರಾಸಾಯನ ಶಾಸ್ತ್ರ ವಿಭಾಗಕ್ಕೆ ನೀಡಲಾಗುವ ನೋಬೆಲ್‌ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಈ ಪ್ರಶಸ್ತಿಗೆ, ಬ್ರಿಟನ್‌ನ ಸ್ಟಾನ್ಲಿ ವಿಟ್ಟಿಂಗ್‌ಹ್ಯಾಮ್‌ ಹಾಗೂ ಜಪಾನ್‌ನ ಅಕಿರಾ ಯೊಶಿನೊ ಅವರಿಗೂ ನೀಡಲಾಗಿದ್ದು, ಜಾನ್‌ ಅವರು, 6.49 ಕೋಟಿ ರೂ. ಮೊತ್ತದ ಈ ಪ್ರಶಸ್ತಿಯನ್ನು ಸ್ಟಾನ್ಲಿ ಮತ್ತು ಅಕಿರಾ ಜತೆಗೆ ಹಂಚಿಕೊಳ್ಳಲಿದ್ದಾರೆ.

ಆಯ್ಕೆಯ ಬಗ್ಗೆ ಪ್ರಕಟಣೆ ನೀಡಿದ ರಾಯಲ್‌ ಸ್ವೀಡಿಶ್‌ ಅಕಾಡೆಮಿ ಆಫ್ ಸೈನ್ಸಸ್‌, “ಲೀಥಿಯಂ ಅಯಾನ್‌ ಬ್ಯಾಟರಿಗಳು ಹೆಚ್ಚು ಕಾಲದವರೆಗೆ ವಿದ್ಯುತ್ಛಕ್ತಿಯನ್ನು ಹಿಡಿದಿಟ್ಟುಕೊಳ್ಳಬಲ್ಲ, ಹಗುರ ವಾದ, ರೀಚಾರ್ಜ್‌ ಮಾಡಬಹುದಾದ ಹಾಗೂ ಅತ್ಯಂತ ಶಕ್ತಿಶಾಲಿ ಬ್ಯಾಟರಿಗಳಾಗಿವೆ. 1991ರಲ್ಲಿ ಮೊದಲ ಬಾರಿಗೆ ಇವು ಮಾರುಕಟ್ಟೆಗೆ ಬಂದ ಅನಂತರ ಬ್ಯಾಟರಿಗಳ ಲೋಕದಲ್ಲಿ ದೊಡ್ಡ ಕ್ರಾಂತಿ ಯನ್ನು ಮಾಡಿದ್ದು, ಮೊಬೈಲು, ಲ್ಯಾಪ್‌ಟಾಪ್‌ಗ್ಳಿಂದ ಹಿಡಿದು ಇಂದು ಕಾರುಗಳವರೆಗೆ ಇವುಗಳ ಬಳಕೆಯಿದೆ’ ಎಂದು ತಿಳಿಸಿದೆ.

Source:-udayavani

ಸಂಬಂಧಿತ ಪೋಸ್ಟ್ಗಳು

ಭಾರತಕ್ಕೆ ಗಡೀಪಾರು ಮಾಡಿದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ: ನೀರವ್ ಮೋದಿ

Ansar Aziz Nadwi

ನಾನು ರಾಜಕುಮಾರಿ ಡಯಾನಾ ಪುನರ್ಜನ್ಮ: ಆಸ್ಟ್ರೇಲಿಯಾ ಬಾಲಕನ ವಿಚಿತ್ರ ಹೇಳಿಕೆಗೆ ಬೆಚ್ಚಿ ಬಿದ್ದ ಜಗತ್ತು

Ansar Aziz Nadwi

ಇರಾನ್ ವಿರುದ್ಧ ಅಮೆರಿಕದ ದಿಗ್ಭಂದನಗಳಿಗೆ ಚೀನಾ ವಿರೋಧ

Ansar Aziz Nadwi

ಒಂದು ಕಾಮೆಂಟ್ ಬಿಡಿ

ವಿಮರ್ಶೆ ಬಿಡಿ