ಅಂತಾರಾಷ್ಟ್ರೀಯ

ಚೀನದ 28 ಕಂಪೆನಿಗಳನ್ನು ಕಪ್ಪು ಪಟ್ಟಿಗೆ ಸೇರಿಸಿದ ಅಮೆರಿಕb

ಬೀಜಿಂಗ್:(ಸೀಧಿಬಾತ್ ನ್ಯೂಸ್ ಸರ್ವಿಸ್) ಅಮೆರಿಕ ಮತ್ತು ಚೀನದ ವ್ಯಾಪಾರ ಸಮರ ಈಗ ಮತ್ತೂಂದು ಹಂತಕ್ಕೆ ತಲುಪಿದ್ದು, ಚೀನದ 28 ಕಂಪೆನಿಗಳನ್ನು ಅಮೆರಿಕ ಕಪ್ಪುಪಟ್ಟಿಗೆ ಸೇರಿಸಿದೆ. ಇದರಿಂದ ಚೀನ ತನ್ನ ಉತ್ಪನ್ನ ಹಾಗೂ ಸೇವೆಯ ಅಮೆರಿಕ ಪಾಲನ್ನು ಕಳೆದುಕೊಳ್ಳಲಿದೆ. ಕಪ್ಪು ಪಟ್ಟಿಗೆ ಸೇರ್ಪಡೆಯಾದ 28 ಸಂಸ್ಥೆಗಳ ಪೈಕಿ 8 ತಂತ್ರಜ್ಞಾನ ಸಂಸ್ಥೆಗಳು ಇವೆ. ಇದರನ್ವಯ ಅಮೆರಿಕದ ಯಾವುದೇ ಸಂಸ್ಥೆ ಚೀನದ ಈ ಎಲ್ಲಾ ಸಂಸ್ಥೆಗಳು ಉತ್ಪಾದಿಸಿದ ವಸ್ತುವನ್ನು ಕೊಂಡುಕೊಳ್ಳಲು ಅವಕಾಶ ಇಲ್ಲವಾಗಿದೆ. ಅವರು ಸರಕಾರದ ಒಪ್ಪಿಗೆ ಪಡೆದೇ ಮುಂದುವರಿಯಬೇಕಾಗಿದೆ. ಅಮೆರಿಕದಲ್ಲಿ ಈಗಾಗಲೇ ಹುವಾಯಿ ಮೊಬೈಲ್ ನಿಷೇಧಿಸಲಾಗಿತ್ತು.

ಯಾವೆಲ್ಲ ತಾಂತ್ರಿಕ ಸಂಸ್ಥೆಗಳು:

ದುವಾ ಟೆಕ್ನಾಲಾಜೀಸ್, ಹೈಕ್ವಿಷನ್, iFLYTEK, ಮೆಗ್ವಿಲ್ ಟೆಕ್ನಾಲಜಿ, ಸೆನ್ಸ್ ಟೈಮ್, Xiamen Meiya Pico Information, ಹಿಟು ಟೆಕ್ನಾಲಜಿ, Yixin Science and Technology ಕಪ್ಪು ಪಟ್ಟಿಗೆ ಸೇರಿದ ಪ್ರಮುಖ ತಂತ್ರಜ್ಞಾನ ಸಂಸ್ಥೆಗಳಾಗಿವೆ.

Source:-udayavani

ಸಂಬಂಧಿತ ಪೋಸ್ಟ್ಗಳು

ಆಫ್ಘಾನಿಸ್ತಾನದಲ್ಲಿ ಮತ್ತೆ ಉಗ್ರರ ಅಟ್ಟಹಾಸ; ತ್ರಿವಳಿ ಸ್ಫೋಟ, ಕನಿಷ್ಛ 5 ಮಂದಿ ಸಾವು

Ansar Aziz Nadwi

ಬಾಂಗ್ಲಾ ಯುವತಿಯರ ಕಳ್ಳಸಾಗಣೆ ಆರೋಪ: ಸಿಂಗಾಪುರದಲ್ಲಿ ಭಾರತೀಯ ದಂಪತಿಗಳ ವಶಕ್ಕೆ

Ansar Aziz Nadwi

ಬ್ರಿಟನ್ ಗೃಹ ಕಾರ್ಯದರ್ಶಿಯಾಗಿ ಭಾರತೀಯ ಮೂಲದ ಪ್ರೀತಿ ಪಟೇಲ್ ನೇಮಕ

Ansar Aziz Nadwi

ಒಂದು ಕಾಮೆಂಟ್ ಬಿಡಿ

ವಿಮರ್ಶೆ ಬಿಡಿ