ರಾಷ್ಟ್ರೀಯ ರಾಷ್ಟ್ರೀಯ ಸುದ್ದಿ

ಹೊಸದಿಲ್ಲಿ: ಸಮ-ಬೆಸ ಯೋಜನೆ ಉಲ್ಲಂಘಿಸಿದರೆ 4 ಸಾವಿರ ದಂಡ

ಹೊಸದಿಲ್ಲಿ:(ಸೀಧಿಬಾತ್ ನ್ಯೂಸ್ ಸರ್ವಿಸ್) ರಾಷ್ಟ್ರ ರಾಜಧಾನಿ ಹೊಸದಿಲ್ಲಿಯಲ್ಲಿ ವಾಯು ಮಾಲಿನ್ಯ ಹಾಗೂ ವಾಹನ ದಟ್ಟನೆಯನ್ನು ನಿಯಂತ್ರಿಸಲು ಅಲ್ಲಿನ ಸರಕಾರ ಕಠಿನ ನಿಯಮಗಳನ್ನು ಜಾರಿಗೊಳಿಸುತ್ತಾ ಬಂದಿದೆ. ದಿಲ್ಲಿಯಲ್ಲಿ ಕೇಜ್ರಿವಾಲ್ ನೇತೃತ್ವದ ಹೊಸ ಸರಕಾರ ಅಸ್ಥಿತ್ವಕ್ಕೆ ಬಂದ ಬಳಿಕ ವಾಹನ ದಟ್ಟನೆ ಮತ್ತು ಸಂಚಾರ ನಿಯಂತ್ರಣಕ್ಕಾಗಿ ಸಮ ಸಮ-ಬೆಸ ಯೋಜನೆಯನ್ನು ಜಾರಿಗೊಳಿಸಿತ್ತು. ಇದೀಗ ಈ ನಿಯಮವನ್ನು ಬಿಗಿಗೊಳಿಸಿದ್ದು ಮೀರಿದರೆ 4000 ರೂ. ದಂಡ ವಿಧಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.

ಈ ಪರಿಷ್ಕ¢ತ ನಿಯಮ ನವೆಂಬರ್ 4ರಿಂದ 15ರ ವರೆಗೆ ಜಾರಿಯಲ್ಲಿರಲಿದೆ. ವಾಯುಮಾಲಿನ್ಯ ತಡೆಗಟ್ಟಲು ಈ ಸಮ-ಬೆಸ ಯೋಜನೆಯನ್ನು ಕಠಿನಗೊಳಿಸುವುದು ಅನಿವಾರ್ಯವಾಗಿದೆ ಎಂದು ಅವರು ಹೇಳಿದ್ದಾರೆ.

ಶಾಲಾ ಮಕ್ಕಳಿಗೆ ವಿನಾಯಿತಿ
ಈ ಯೋಜನೆಯಲ್ಲಿ ಶಾಲಾ ಮಕ್ಕಳನ್ನು ಕರೆದೊಯ್ಯುವ ವಾಹನಗಳಿಗೆ ವಿನಾಯಿತಿ ನೀಡಲಾಗಿದೆ. ಶಾಲಾ ಮಕ್ಕಳನ್ನು ಕರೆದೊಯ್ಯುವ ದ್ವಿಚಕ್ರ ವಾಹನಗಳು ಸೇರಿದಂತೆ ಶಾಲಾ ಬಸ್ಗಳಿಗೆ ವಿನಾಯಿತಿ ನೀಡಲಾಗಿದೆ. ಮಾತ್ರವಲ್ಲದೇ ಅಂಗವಿಕಲರಿಗೆ ಸೇರಿದ ವಾಹನಗಳು, ರಾಷ್ಟ್ರಪತಿ, ಉಪರಾಷ್ಟ್ರಪತಿ, ಸಿಜೆಐ, ಲೋಕಸಭಾ ಸ್ಪೀಕರ್ಗೆ ಈ ನಿಯಮ ಅನ್ವಯಿಸುವುದಿಲ್ಲ ಎಂದು ಕೇಜ್ರಿವಾಲ್ ಹೇಳಿದ್ದಾರೆ.

ದೆಹಲಿ ಸಿಎಂ ಮತ್ತು ಸಚಿವರಿಗೆ ವಿನಾಯಿತಿ ಇರುವುದಿಲ್ಲ. ಮಾತ್ರವಲ್ಲದೇ ಹೊರ ರಾಜ್ಯದಿಂದ ಬರುವ ವಾಹನಗಳಿಗೂ ಈ ನಿಯಮ ಅನ್ವಯವಾಗಲಿದೆ. ಬೆಳಗ್ಗೆ 8ರಿಂದ ಸಂಜೆ 8ರ ವರೆಗೆ ಈ ನಿಯಮ ಜಾರಿಯಲ್ಲಿರಲಿದೆ.

ಕಳೆದ ವರ್ಷ ದಿಲ್ಲಿ ಭಾರೀ ಪ್ರಮಾಣದ ಧೂಳು ನಿರ್ಮಾಣವಾಗಿತ್ತು. ಇದು ಹಲವು ಸಮಸ್ಯೆಗಳಿಗೆ ಎಡೆಮಾಡಿಕೊಟ್ಟಿತ್ತು.ಸದ್ಯ ಅಂತಹ ಪರಿಸ್ಥಿತಿ ಮರು ಕಳಿಸಬಾರದು ಎಂಬ ನಿಟ್ಟಿನಲ್ಲಿ ಸರಕಾರ ಈ ಕ್ರಮ ಕೈಗೊಂಡಿದೆ. ದಿಲ್ಲಿ ನಗರದ 12 ಕಡೆಗಳಲ್ಲಿ ಅತೀ ಹೆಚ್ಚು ವಾಯು ಮಾಲಿನ್ಯ ದಾಖಲಾಗುತ್ತಿದೆ. ಇದಕ್ಕಾಗಿ ಸರಕಾರ ಈ ಕ್ರಮ ಕೈಗೊಂಡಿದೆ. ಮಾತ್ರವಲ್ಲದೇ ಈ ತಿಂಗಾಳಾಂತ್ಯದಲ್ಲಿ ದೀಪಾವಳಿ ಹಬ್ಬಬರಲಿದ್ದು ವಾಯು ಮತ್ತಷ್ಟು ಮಲೀಬವಾಗುವ ಸಾಧ್ಯತೆ ಇದೆ.

Source:-udayavani

ಸಂಬಂಧಿತ ಪೋಸ್ಟ್ಗಳು

ಆರ್‌ಟಿಐ ತಿದ್ದುಪಡಿ ಕಾಯ್ದೆಗೆ ಲೋಕಸಭೆ ಅನುಮೋದನೆ

Ansar Aziz Nadwi

ಅಪ್ಪ ಕೊಡಿಸಿದ ಬಿಎಂಡಬ್ಲ್ಯು ಕಾರನ್ನು ನದಿಗೆ ಬಿಟ್ಟ…

Ansar Aziz Nadwi

ಅಜ್ಜಿ ಎಂದಿದ್ದಕ್ಕೆ ಬೈದ ವೃದ್ಧೆ- ಸಿಟ್ಟಿಗೆದ್ದು ಕತ್ತು ಹಿಸುಕಿ ಕೊಂದ ಮನೆ ಮಾಲೀಕ

Ansar Aziz Nadwi

ಒಂದು ಕಾಮೆಂಟ್ ಬಿಡಿ

ವಿಮರ್ಶೆ ಬಿಡಿ