ರಾಷ್ಟ್ರೀಯ ರಾಷ್ಟ್ರೀಯ ಸುದ್ದಿ

ಅಸ್ಸಾಂ : ಮುಳುಗಿದ ಪ್ರಯಾಣಿಕರ ದೋಣಿ ; ಹಲವರು ನಾಪತ್ತೆ

ಗೌಹಾತಿ:(ಸೀಧಿಬಾತ್ ನ್ಯೂಸ್ ಸರ್ವಿಸ್) ಅಸ್ಸಾಂನ ಜಿಯಾ ಭಾರಾಲಿ ನದಿಯಲ್ಲಿ ನಾಡ ದೋಣಿಯೊಂದು ಮುಳುಗಿರುವ ಘಟನೆ ವರದಿಯಾಗಿದೆ. ಈ ದೋಣಿಯಲ್ಲಿ ಸುಮಾರು 80 ಜನ ಪ್ರಯಾಣಿಕರಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಘಟನೆಯ ಬಳಿಕ ದೋಣಿಯಲ್ಲಿದ್ದ ಹಲವರು ನಾಪತ್ತೆಯಾಗಿದ್ದಾರೆ.

ಈ ನಾಡದೋಣಿಯು ಲಾಲ್ ತಪು ಸಮೀಪದ ಬಿಹಿಯಾ ಗಾಂವ್ ನಿಂದ ತೇಜ್ ಪುರದ ಪಾಂಚ್ ಮಿಲೇ ಪ್ರದೇಶಕ್ಕೆ ಸಾಗುತ್ತಿತ್ತು ಎಂದು ತಿಳಿದುಬಂದಿದೆ.

ದುರ್ಘಟನೆಗೆ ಒಳಗಾದ ಈ ದೋಣಿ ಜನರನ್ನು ಮಾತ್ರವಲ್ಲದೇ ಮೋಟಾರು ಬೈಕುಗಳನ್ನೂ ಸಹ ಹೊತ್ತೊಯ್ಯೊತ್ತಿತ್ತು ಎಂಬ ಮಾಹಿತಿಯೂ ಲಭ್ಯವಾಗಿದೆ. ಪ್ರತೀ ಗುರುವಾರ ತೇಜ್ ಪುರದ ಪಾಂಚ್ ಮಿಲೇಯಲ್ಲಿ ನಡೆಯುವ ಸಂತೆ ಮಾರುಕಟ್ಟೆಗೆ ಇವರೆಲ್ಲರೂ ಹೋಗುತ್ತಿದ್ದಾಗ ನದಿಯಲ್ಲಿ ಈ ದುರ್ಘಟನೆ ನಡೆದಿದೆ. ದೋಣಿ ನದಿಯಲ್ಲಿ ಮುಳುಗುತ್ತಿದ್ದಂತೆ ಹಲವರು ಈಜಿ ದಡ ಸೇರುವಲ್ಲಿ ಸಫಲರಾಗಿದ್ದಾರೆ. ಆದರೆ ಇನ್ನೂ ಕೆಲವರು ನೀರಿನ ಸೆಳೆತಕ್ಕೆ ಸಿಲುಕಿ ಕೊಚ್ಚಿ ಹೋಗಿರಬಹುದೆಂದು ಶಂಕಿಸಲಾಗುತ್ತಿದೆ.

ಘಟನಾ ಪ್ರದೇಶದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು ರಾಜ್ಯ ವಿಪತ್ತು ನಿರ್ವಹಣಾ ಪಡೆ ಮತ್ತು ಜಿಲ್ಲಾಡಳಿತ ಸಿಬ್ಬಂದಿ ಈ ರಕ್ಷಣಾ ಕಾರ್ಯಾಚರಣೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇವರಿಗೆ ಸ್ಥಳೀಯರು ಸಹಕಾರ ನೀಡುತ್ತಿದ್ದಾರೆ.

Source:-udayavani

ಸಂಬಂಧಿತ ಪೋಸ್ಟ್ಗಳು

ಕೊಲಿಜಿಯಂ ಚರ್ಚೆ ಬಹಿರಂಗ ಸಲ್ಲ

Ansar Aziz Nadwi

370ನೇ ವಿಧಿ ರದ್ದತಿಗೆ ಕೈ ವಿರೋಧ; ಮುಂದಿನ ಗುರಿ ಪಿಒಕೆ-ವಿಪಕ್ಷಗಳ ವಿರೋಧಕ್ಕೆ ಶಾ ತಿರುಗೇಟು

Ansar Aziz Nadwi

ಪ್ರತಿ ಗ್ರಾಮದಲ್ಲಿ ರಾಷ್ಟ್ರಧ್ವಜ

Ansar Aziz Nadwi

ಒಂದು ಕಾಮೆಂಟ್ ಬಿಡಿ

ವಿಮರ್ಶೆ ಬಿಡಿ