ಕರ್ನಾಟಕ ಕರ್ನಾಟಕ / ಕೋಸ್ಟಲ್

ಡೋಣಿ ನದಿ ಪ್ರವಾಹದಲ್ಲಿ ಸಿಲುಕಿರುವ ಮೂವರು ಕುರಿಗಾಯಿಗಳು

ವಿಜಯಪುರ:(ಸೀಧಿಬಾತ್ ನ್ಯೂಸ್ ಸರ್ವಿಸ್) ಜಿಲ್ಲೆಯ ತಾಳಿಕೋಟೆ ತಾಲೂಕಿನ ಮಿಣಜಗಿ ಗ್ರಾಮದ ಬಳಿ ಡೋಣಿ ನದಿಯ ಪ್ರವಾಹದ ಕಾರಣ ಮೂವರು ಕುರಿಗಾಯಿಗಳು ಹಾಗೂ 300 ಕುರಿಗಳು ನದಿಯ ನಡುಗಡ್ಡೆಯಲ್ಲಿ ಸಿಲುಕಿದ್ದಾರೆ.

ಸೋಮವಾರ ರಾತ್ರಿ ಪ್ರವಾಹ ಉಕ್ಕೇರಿದ್ದು, ಕುರಿಗಾಯಿಗಳು ಅಪಾಯಕ್ಕೆ ಸಿಲುಕಿರುವ ಸುದ್ದಿ ತಿಳಿದ ತಾಳಿಕೋಟೆ ತಹಶೀಲ್ದಾರ್ ಅನಿಲಕುಮಾರ ಢವಳಗಿ, ತಾಳಿಕೋಟೆ ಪೊಲೀಸರು ಹಾಗೂ ಅಗ್ನಿಶಾಮಕ ದಳ ಸ್ಥಳಕ್ಕೆ ಭೇಟಿ ನೀಡಿ ರಕ್ಷಣಾ ಕಾರ್ಯಕ್ಕೆ ಮುಂದಾಗಿದ್ದಾರೆ. ಆದರೆ ಪ್ರವಾಹ ಗಂಭೀರ ಸ್ವರೂಪದಲ್ಲಿ ಇದ್ದು, ಬೋಟ್ ಮುಖಾಂತರ ಕುರಿಗಾಹಿಗಳ ರಕ್ಷಣೆಗೆ ಚಿಂತನೆ ನಡೆದಿದೆ.

ಜಿಲ್ಲೆಯ ಡೋಣಿ ನದಿ ಪಾತ್ರದಲ್ಲಿ ನಿನ್ನೆ ಅಧಿಕ ಪ್ರಮಾಣದಲ್ಲಿ ಮಳೆ ಆಗಿದ್ದು, ನದಿಯಲ್ಲಿ ಉಂಟಾದ ಪ್ರವಾಹದಿಂದ ಕುರಿಗಾಯಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ.

Source:-udayavani

ಸಂಬಂಧಿತ ಪೋಸ್ಟ್ಗಳು

ನಾನು-ಸಿದ್ದು ವೈರಿಗಳಲ್ಲ

Ansar Aziz Nadwi

ಹೊಂಚು ಹಾಕಿ ರೌಡಿಶೀಟರ್‌ನನ್ನು ಕೊಚ್ಚಿ ಕೊಲೆಗೈದ್ರು!

Ansar Aziz Nadwi

ಬೀದಿಗೆ ಬಂದ ರಾಜ್ಯ ಕಾಂಗ್ರೆಸ್‌ ಒಳ ಜಗಳ

Ansar Aziz Nadwi

ಒಂದು ಕಾಮೆಂಟ್ ಬಿಡಿ

ವಿಮರ್ಶೆ ಬಿಡಿ