ಅಂತಾರಾಷ್ಟ್ರೀಯ

ಕರ್ತಾರ್ಪುರ ಕಾರಿಡಾರ್: ಮತ್ತೆ ಕಾಶ್ಮೀರ ವಿಚಾರ ಮೂಗು ತೂರಿಸಿದ ಪಾಕ್

ಕರ್ತಾರ್ಪುರ:(ಸೀಧಿಬಾತ್ ನ್ಯೂಸ್ ಸರ್ವಿಸ್) ಕಾಶ್ಮೀರ ಪ್ರಾದೇಶಿಕ ಸಮಸ್ಯೆಯಲ್ಲ, ಕಣಿವ ರಾಜ್ಯದಲ್ಲಿನ ಮಾನವ ಹಕ್ಕುಗಳ ಉಲ್ಲಂಘನೆಯ ವಿಚಾರವಾಗಿದೆ ಎಂದು ಹೇಳುವ ಮೂಲಕ ಮತ್ತೆ ಕಾಶ್ಮೀರ ವಿಚಾರದಲ್ಲಿ ಪಾಕಿಸ್ತಾನ ಮೂಗು ತೂರಿಸಿದೆ.

ಪಂಜಾಬ್ ಪ್ರಾಂತ್ಯದ ನರ್ವಾಲ್ ಜಿಲ್ಲೆಯಲ್ಲಿರುವ ಸಿಖ್ ಸಮುದಾಯದ ಪವಿತ್ರ ಕ್ಷೇತ್ರ ಗುರುದ್ವಾರ ದರ್ಬಾರ್ ಸಾಹಿಬ್ ದೇಗುಲಕ್ಕೆ ಸಂಪರ್ಕ ಕಲ್ಪಿಸುವ ಕರ್ತಾರ್ಪುರ ಕಾರಿಡಾರ್ ಯೋಜನೆಗೆ ಚಾಲನೆ ನೀಡಿದ ಬಳಿಕ ಮಾತನಾಡಿರುವ ಪಾಕಿಸ್ತಾನ ಪ್ರಧಾನಮಂತ್ರಿ ಇಮ್ರಾನ್ ಖಾನ್ ಅವರು ಕಾಶ್ಮೀರ ವಿಚಾರ ಪ್ರಸ್ತಾಪಿಸಿದ್ದಾರೆ.

ಕಾಶ್ಮೀರ ವಿವಾದ 72 ವರ್ಷಗಳಿಂದಲೂ ಭಾರತ ಹಾಗೂ ಪಾಕಿಸ್ತಾನ ರಾಷ್ಟ್ರಗಳ ನಡುವಣ ದ್ವೇಷವನ್ನು ಬೆಳೆಸಿದೆ. ಕಾಶ್ಮೀರ ವಿವಾದ ಬಗೆಹರಿಕೆಯಿಂದ ಭಾರತ ಮತ್ತು ಪಾಕಿಸ್ತಾನ ರಾಷ್ಟ್ರಗಳ ಸಮೃದ್ಧಿ ಹಾಗೂ ಪರಸ್ಪರ ಅಭಿವೃದ್ಧಿಗೆ ಕಾರಣವಾಗಲಿದೆ. ಕಾಶ್ಮೀರ ಜನತೆಗೆ ಭಾರತ ನ್ಯಾಯ ನೀಡಬೇಕು. ಕಾಶ್ಮೀರ ಪ್ರಾದೇಶಿಕ ವಿಚಾರವಲ್ಲ. 80 ಜನರ ಮೇಲಿನ ಮಾನವ ಹಕ್ಕು ಉಲ್ಲಂಘನೆಯ ವಿಚಾರವಾಗಿದೆ. ಕಾಶ್ಮೀರಕ್ಕೆ ನ್ಯಾಯ ಒದಗಿಸಬೇಕು. ಶಾಂತಿ ನೆಲೆಸಬೇಕು. 370 ವಿಧಿ ರದ್ದುಯಿಂದ ಕಾಶ್ಮೀರದ ಸಂವಹನವನ್ನು ಅಳಿಸಿ ಹಾಕಿದೆ ಎಂದು ಹೇಳಿದ್ದಾರೆ.

Source:-kannadaprabha

ಸಂಬಂಧಿತ ಪೋಸ್ಟ್ಗಳು

ನಾನು ರಾಜಕುಮಾರಿ ಡಯಾನಾ ಪುನರ್ಜನ್ಮ: ಆಸ್ಟ್ರೇಲಿಯಾ ಬಾಲಕನ ವಿಚಿತ್ರ ಹೇಳಿಕೆಗೆ ಬೆಚ್ಚಿ ಬಿದ್ದ ಜಗತ್ತು

Ansar Aziz Nadwi

ಬಾಂಗ್ಲಾ ಯುವತಿಯರ ಕಳ್ಳಸಾಗಣೆ ಆರೋಪ: ಸಿಂಗಾಪುರದಲ್ಲಿ ಭಾರತೀಯ ದಂಪತಿಗಳ ವಶಕ್ಕೆ

Ansar Aziz Nadwi

‘ಇನ್ನು ಸಹಿಸೋಕಾಗಲ್ಲ’: ಭಾರತದ ವಿರುದ್ಧ ಮತ್ತೆ ಗುಡುಗಿದ ಡೊನಾಲ್ಡ್ ಟ್ರಂಪ್

Ansar Aziz Nadwi

ಒಂದು ಕಾಮೆಂಟ್ ಬಿಡಿ

ವಿಮರ್ಶೆ ಬಿಡಿ