ಅಂತಾರಾಷ್ಟ್ರೀಯ

ಗಡಿಯನ್ನು ತೆರೆಯುವುದು ಮಾತ್ರವಲ್ಲದೆ ಸಿಖ್ ಸಮುದಾಯಕ್ಕೆ ನಮ್ಮ ಹೃದಯ ವೈಶ್ಯಾಲ್ಯ ತೋರಿಸಿದ್ದೇವೆ: ಇಮ್ರಾನ್ ಖಾನ್

ಇಸ್ಲಾಮಾಬಾದ್:(ಸೀಧಿಬಾತ್ ನ್ಯೂಸ್ ಸರ್ವಿಸ್) ಐತಿಹಾಸಿಕ ಕರ್ತಾರ್ ಪುರ್ ಸಾಹಿಬ್ ಕಾರಿಡಾರ್ ಉದ್ಘಾಟನೆ ಮಾಡಿದ್ದು ಸ್ಥಳೀಯ ಶಾಂತಿಗೆ ಪಾಕಿಸ್ತಾನ ತೋರಿಸುತ್ತಿರುವ ಬದ್ಧತೆಯನ್ನು ಪ್ರಮಾಣೀಕರಿಸುತ್ತದೆ ಎಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ.

ಪಾಕಿಸ್ತಾನ ಕಡೆಯ ಕರ್ತಾರ್ ಪುರ್ ಕಾರಿಡಾರ್ ಉದ್ಘಾಟಿಸಿದ ಬಳಿಕ ಮಾತನಾಡಿದ ಅವರು, ಸಿಖ್ಖರ ಗುರು ಬಾಬಾ ಗುರು ನಾನಕ್ ದೇವ್ ಅವರ 550ನೇ ಜಯಂತಿ ಅಂಗವಾಗಿ ಶುಭ ಕೋರಿದರು.

ಕರ್ತಾರ್ ಪುರ್ ಸಾಹಿಬ್ ಕಾರಿಡಾರ್ ಭಾರತದ ಗುರ್ದಾಸ್ ಪುರ್ ದೇರಾ ಬಾಬಾ ಸಾಹಿಬ್ ಗೆ ಮತ್ತು ಪಾಕಿಸ್ತಾನದ ಗುರುದ್ವಾರ ಕರ್ತಾರ್ ಪುರ ಸಾಹಿಬ್ ಗೆ ಸಂಪರ್ಕ ಹೊಂದುತ್ತಿದ್ದು ಇಂದು ಅದರ ಉದ್ಘಾಟನೆ ಏರ್ಪಟ್ಟಿತು. ಕಾರಿಡಾರ್ ಉದ್ಘಾಟನೆಯಿಂದ ಭಾರತ ಮತ್ತು ಪಾಕಿಸ್ತಾನ ದೇಶಗಳ ಜನರ ನಡುವಿನ ಸಂಪರ್ಕ ಹೆಚ್ಚಾಗಿ ಸ್ನೇಹ ಬೆಳೆಯುವ ಧ್ಯೋತಕವಾಗಿದೆ ಎಂದೇ ಹೇಳಲಾಗುತ್ತಿದೆ.

ಗುರುದ್ವಾರ ಕರ್ತಾರ್ ಪುರ ಸಾಹಿಬ್ ಪಾಕಿಸ್ತಾನದ ರವಿ ನದಿಯ ತೀರದಲ್ಲಿದೆ. ಪಂಜಾಬ್ ನ ಗುರುದಾಸ್ಪುರದ ದೇರಾ ಬಾಬಾ ನಾನಕ್ ಮಂದಿರದಿಂದ 4 ಕಿಲೋ ಮೀಟರ್ ದೂರದಲ್ಲಿದೆ.

ಕಾರಿಡಾರ್ ಉದ್ಘಾಟನೆಯಿಂದ ಈ ಪ್ರದೇಶದ ಹಾದಿ ಸಮೃದ್ಧಿಯಿಂದ ಸಾಗಿ ನಮ್ಮ ಮುಂಬರುವ ಪೀಳಿಗೆಯ ಭವಿಷ್ಯ ಉಜ್ವಲವಾಗುತ್ತದೆ ಎಂದು ನಂಬಿದ್ದೇವೆ, ಇಂದು ಗಡಿಯನ್ನು ಉದ್ಘಾಟನೆ ಮಾಡುವ ಮೂಲಕ ಸಿಖ್ ಸಮುದಾಯದವರಿಗೆ ನಮ್ಮ ಹೃದಯ ವೈಶಾಲ್ಯವನ್ನು ತೆರೆದಿದ್ದೇವೆ ಎಂದು ಇಮ್ರಾನ್ ಖಾನ್ ಹೇಳಿದ್ದಾರೆ.

Source:-kannadaprabha

ಸಂಬಂಧಿತ ಪೋಸ್ಟ್ಗಳು

ಚೀನಾದಲ್ಲಿ ಭಾರಿ ಮಳೆ: ಪ್ರವಾಸಿಗರಿಗೆ ‘ಮೌಂಟ್ ಹುವಾಶಾನ್’ ಬಂದ್

Ansar Aziz Nadwi

ಪಾಕಿಸ್ತಾನಕ್ಕೆ ಟೊಮಾಟೋ ಶಾಕ್, ಒಂದು ಕೆಜಿಗೆ 400 ರೂ.!

Ansar Aziz Nadwi

ಆಫ್ಘಾನಿಸ್ತಾನದಲ್ಲಿ ಮತ್ತೆ ಉಗ್ರರ ಅಟ್ಟಹಾಸ; ತ್ರಿವಳಿ ಸ್ಫೋಟ, ಕನಿಷ್ಛ 5 ಮಂದಿ ಸಾವು

Ansar Aziz Nadwi

ಒಂದು ಕಾಮೆಂಟ್ ಬಿಡಿ

ವಿಮರ್ಶೆ ಬಿಡಿ