ರಾಷ್ಟ್ರೀಯ ರಾಷ್ಟ್ರೀಯ ಸುದ್ದಿ

ನಂಜನಗೂಡು-ವಯನಾಡ್‌ ರೈಲು ಯೋಜನೆಗೆ ನೆರವು ನೀಡಿ

ಹೊಸದಿಲ್ಲಿ:(ಸೀಧಿಬಾತ್ ನ್ಯೂಸ್ ಸರ್ವಿಸ್) ಕರ್ನಾಟಕದ ನಂಜನಗೂಡು – ವಯನಾಡು-ನಿಲಂಬೂರ್‌ ರೈಲ್ವೇ ಯೋಜನೆ ಕಾಮಗಾರಿ ಹಲವಾರು ವರ್ಷಗಳಿಂದ ಕುಂಟುತ್ತಾ ಸಾಗಿದೆ. ಈ ಕಾಮಗಾರಿ ಆದಷ್ಟು ಬೇಗ ಪೂರ್ಣಗೊಳಿಸಲು ಕೇಂದ್ರ ಸರಕಾರ ಕೇರಳಕ್ಕೆ ಸಹಾಯ ಮಾಡಬೇಕು ಎಂದು ವಯನಾಡು ಸಂಸದ ರಾಹುಲ್‌ ಗಾಂಧಿ ಬುಧವಾರ ಲೋಕಸಭೆಯಲ್ಲಿ ಆಗ್ರಹಿಸಿದರು.

ಆ ಭಾಗದಲ್ಲಿ ರೈಲ್ವೇ ಸಂಪರ್ಕ ಏನೇನೂ ಪ್ರಗತಿಯಾಗಿಲ್ಲ. ಬಂಡೀಪುರ ರಾಷ್ಟ್ರೀಯ ಹೆದ್ದಾರಿಯನ್ನು ರಾತ್ರಿ ವೇಳೆ ಮುಚ್ಚಿದ್ದನ್ನು ಪ್ರಸ್ತಾವಿಸಿ, ಜನರಿಗೆ ಸಂಚಾರಕ್ಕೆ ಅನನುಕೂಲವಾಗಿದೆ. ಹೀಗಾಗಿ ಆ ಭಾಗದ ಜನರು ತೀರಾ ಅಗತ್ಯದ ಸಮಯದಲ್ಲೂ ಒಂದು ಸ್ಥಳದಿಂದ ಮತ್ತೂಂದು ಸ್ಥಳಕ್ಕೆ ಹೋಗಲು ಪರದಾಡಬೇಕಾಗುತ್ತದೆ. ಆದರೂ ಈ ಕಾಮಗಾರಿ ಹಲವಾರು ವರ್ಷಗಳಿಂದ ಪ್ರಗತಿ ಕಾಣುತ್ತಿಲ್ಲ ಎಂದರು.

ಈ ರೈಲ್ವೇ ಮಾರ್ಗ ಕಾರ್ಯಾರಂಭ ಮಾಡಿದರೆ ವಯನಾಡಿನಿಂದ ಬೆಂಗಳೂರು ಮತ್ತು ತಿರುವನಂತಪುರಂ ನಡುವಿನ ಪ್ರಯಾಣದ ಅವಧಿ ತಗ್ಗುತ್ತದೆ. ಜತೆಗೆ ವಯನಾಡು ಭಾಗದ ಜನರಿಗೆ ಹೊಸ ಉದ್ಯೋಗಾವಕಾಶಗಳು ದೊರೆಯುತ್ತವೆ. ಈ ರೈಲ್ವೇ ಮಾರ್ಗ ಆ ಭಾಗದ ಜನರ ಬಹುದಿನಗಳ ಕನಸು. ಆದರೆ ಅದು ಈಡೇರುತ್ತಿಲ್ಲ. ಸಾಮಾಜಿಕ ಮತ್ತು ಆರ್ಥಿಕ ಪ್ರಾಮುಖ್ಯ ಕಾರಣದಿಂದಾಗಿ ಈ ರೈಲ್ವೇ ಮಾರ್ಗ ಅತ್ಯಗತ್ಯ ಎಂದರು.

Source:-udayavani

ಸಂಬಂಧಿತ ಪೋಸ್ಟ್ಗಳು

ಭಾರತದ ಖ್ಯಾತ ಗಾಯಕ ಯೇಸುದಾಸ್ ಸಹೋದರನ ಶವ ಕೆರೆಯಲ್ಲಿ ಪತ್ತೆ!

Ansar Aziz Nadwi

ಹಣಕಾಸು ಬಿಕ್ಕಟ್ಟಿನಲ್ಲಿರುವ ಲಕ್ಷ್ಮೀ ವಿಲಾಸ್ ಬ್ಯಾಂಕ್ ಖರೀದಿಗೆ ಕೋಟಕ್ ಮಹೀಂದ್ರ ಪ್ರಯತ್ನ

Ansar Aziz Nadwi

ಲಡಾಖ್ ನಲ್ಲಿ ಭಾರತೀಯ ಯೋಧರನ್ನು ಚೀನಾ ಬಂಧಿಸಿಲ್ಲ: ಭಾರತೀಯ ಸೇನೆ

Ansar Aziz Nadwi

ಒಂದು ಕಾಮೆಂಟ್ ಬಿಡಿ

ವಿಮರ್ಶೆ ಬಿಡಿ