ಕರ್ನಾಟಕ ಕರ್ನಾಟಕ / ಕೋಸ್ಟಲ್

ಯುವತಿಯಿಂದ ಹಣ ದೋಚಿದ ಸೈಬರ್‌ ವಂಚಕ!

ಬೆಂಗಳೂರು:(ಸೀಧಿಬಾತ್ ನ್ಯೂಸ್ ಸರ್ವಿಸ್) ವೈವಾಹಿಕ ಜಾಲತಾಣದ ಮೂಲಕ ಯುವತಿಯೊಬ್ಬರನ್ನು ಪರಿಚಯಿಸಿಕೊಂಡ ವಂಚಕ ವಿದೇಶಿ ಉಡುಗೊರೆ ಕಳುಹಿಸುವ ನೆಪದಲ್ಲಿ 2.30 ಲ. ರೂ. ಪಡೆದು ವಂಚಿರುವ ಪ್ರಕರಣ ಕಬ್ಬನ್‌ ಪಾರ್ಕ್‌ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದೆ.

ಖಾಸಗಿ ಕಂಪೆನಿ ಉದ್ಯೋಗಿ ಆಗಿರುವ ಸೋನಾಲಿ ಸುಲ್ತಾನ ಚೌಧರಿ ಎಂಬವರು ನೀಡಿರುವ ದೂರಿನ ಅನ್ವಯ ಮನೋಜ್‌ ಗುಪ್ತಾ ಎಂಬಾತನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ವೈವಾಹಿಕ ಜಾಲತಾಣದ ಮೂಲಕ ಪರಿಚಯವಾಗಿದ್ದ ಮನೋಜ್‌ ಗುಪ್ತಾ ಹೆಸರಿನ ವ್ಯಕ್ತಿ ತಾನು ಲಂಡನ್‌ನಲ್ಲಿ ಕೆಲಸ ಮಾಡುತ್ತಿರುವುದಾಗಿ ಸೋನಾಲಿ ಅವರಿಗೆ ಹೇಳಿದ್ದ. ಹೀಗೆ ಆತ್ಮೀಯರಾದ ಬಳಿಕ ನ.25ರಂದು ಲಂಡನ್‌ನಿಂದ ವಿದೇಶಿ ಉಡುಗೊರೆ ಕಳುಹಿಸುತ್ತಿರುವುದಾಗಿ ಹೇಳಿದ್ದ. ಉಡುಗೊರೆ ಪಡೆಯಲು ಸುಂಕ ದರ 34.500 ರೂ. ಮತ್ತು ವಿಮಾ ಪಾಲಿಸಿ ದರ 95 ಸಾವಿರ ರೂ. ಅಕೌಂಟ್‌ಗೆ ಕಳುಹಿಸುವಂತೆ ಹೇಳಿದ್ದು ಇದನ್ನು ನಂಬಿದ್ದ ಸೋನಾಲಿ ಆತ ಸೂಚಿಸಿದ ಬ್ಯಾಂಕ್‌ ಖಾತೆಗಳಿಗೆ ಹಣ ಕಳುಹಿಸಿಕೊಟ್ಟರೂ ಉಡುಗೊರೆ ಮಾತ್ರ ಬಂದಿರಲಿಲ್ಲ.

ಇದಾದ ಐದು ದಿನಗಳ ಬಳಿಕ ನ.30ರಂದು ಉಡುಗೊರೆ ತೆಗೆದುಕೊಂಡು ಮುಂಬಯಿ ವಿಮಾನ ನಿಲ್ದಾಣಕ್ಕೆ ಬಂದಿದು, “ಹಳದಿ ಜ್ವರ ಮುಕ್ತ’ ವ್ಯಕ್ತಿಯೆಂಬುದಕ್ಕೆ ಪ್ರಮಾಣಪತ್ರ ಪಡೆಯಲು 28,500 ಪಾವತಿಸಬೇಕು. ಹೀಗಾಗಿ ಹಣ ಕಳುಹಿಸುವಂತೆ ಕೋರಿದ್ದಾನೆ. ಆಗಲೂ ಸೋನಾಲಿ ಹಣ ಕಳುಹಿಸಿದ್ದಾರೆ. ಬಳಿಕ ತನ್ನ ಬಳಿಯಿರುವ 21 ಸಾವಿರ ಅಮೆರಿಕನ್‌ ಡಾಲರ್‌ ರೂಪಾಯಿಗೆ ಬದಲಾಯಿಸಿಕೊಳ್ಳಬೇಕು ಎಂದು ಹೇಳಿ 72,900 ರೂ. ಹಣ ಪಡೆದುಕೊಂಡಿದ್ದಾನೆ.ಇದಾದ ಕೆಲವೇ ಸಮಯಕ್ಕೆ ಮೊಬೈಲ್‌ ಸ್ವಿಚ್‌ಆಫ್ ಮಾಡಿಕೊಂಡಿದ್ದು ಬಳಿಕ ಸೋನಾಲಿ ಅವರ ಸಂಪರ್ಕಕ್ಕೆ ಸಿಕ್ಕಿಲ್ಲ.

ಕಡೆಗೆ ತಾನು ಮೋಸಹೋಗಿರುವುದು ಗೊತ್ತಾಗಿ ದೂರು ನೀಡಿದ್ದಾರೆ. ಆರೋಪಿ ವಿರುದ್ಧ ಮಾಹಿತಿ ತಂತ್ರಜ್ಞಾನ ಮತ್ತು ವಂಚನೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Source:-udayavani

ಸಂಬಂಧಿತ ಪೋಸ್ಟ್ಗಳು

ಉಪ ಕದನ ಮುನ್ನ ಲೋಕಲ್‌ ಫೈಟ್‌ ಟೆಸ್ಟ್‌

Ansar Aziz Nadwi

ರಿವರ್ಸ್‌ ಆಪರೇಷನ್‌: ಅಗತ್ಯ ಬಿದ್ದರೆ ನೋಡೋಣ ;ಸಿದ್ದರಾಮಯ್ಯ

Ansar Aziz Nadwi

6 ತಿಂಗಳ ಹಿಂದೆಯಷ್ಟೇ ಮದ್ವೆಯಾಗಿದ್ದ ಪತ್ನಿಯನ್ನ ಕೊಂದು ನೇಣಿಗೆ ಶರಣಾದ ಪತಿ

Ansar Aziz Nadwi

ಒಂದು ಕಾಮೆಂಟ್ ಬಿಡಿ

ವಿಮರ್ಶೆ ಬಿಡಿ