ಕರ್ನಾಟಕ ಕರ್ನಾಟಕ / ಕೋಸ್ಟಲ್

ಮಿನಿ ಸಮರ; ಅಭ್ಯರ್ಥಿಗಳ ಸೋಲು, ಗೆಲುವಿನ ಲೆಕ್ಕಚಾರದ ನಡುವೆ ಭರ್ಜರಿ ಬೆಟ್ಟಿಂಗ್ ಭರಾಟೆ!

ಬೆಂಗಳೂರು:(ಸೀಧಿಬಾತ್ ನ್ಯೂಸ್ ಸರ್ವಿಸ್) ರಾಜ್ಯದ ಹದಿನೈದು ಕ್ಷೇತ್ರಗಳಿಗೆ ಉಪಚುನಾವಣೆ ನಡೆದ ಬೆನ್ನಲ್ಲೇ ಫಲಿತಾಂಶಕ್ಕಾಗಿ ದಿನಗಣನೆ ಆರಂಭವಾಗಿದೆ. ಮತ್ತೊಂದೆಡೆ ಪ್ರತಿಷ್ಠಿತ ಕ್ಷೇತ್ರಗಳಲ್ಲಿ ಅರಳಿಕಟ್ಟೆ, ಹೋಟೆಲ್, ಟೀ ಸ್ಟಾಲ್ ಗಳಲ್ಲಿ ಬೆಟ್ಟಿಂಗ್ ಭರಾಟೆ ಭರ್ಜರಿಯಾಗಿ ನಡೆಯುತ್ತಿದೆ ಎಂದು ವರದಿ ತಿಳಿಸಿದೆ.

ಕೆಆರ್ ಪೇಟೆ, ಹುಣಸೂರು, ಗೋಕಾಕ್, ಹೊಸಕೋಟೆ, ಚಿಕ್ಕಬಳ್ಳಾಪುರ ಕ್ಷೇತ್ರಗಳಲ್ಲಿ ಗೆಲ್ಲುವ ಅಭ್ಯರ್ಥಿ ಪರ ಹಣದ ಜತೆಗೆ ಕುರಿ, ಕೋಳಿ, ಹಸು, ದ್ವಿಚಕ್ರ ವಾಹನಗಳನ್ನು ಪಣಕ್ಕಿಟ್ಟು ಬೆಟ್ಟಿಂಗ್ ಕಟ್ಟುತ್ತಿರುವುದಾಗಿ ವರದಿ ವಿವರಿಸಿದೆ. ಹುಣಸೂರು, ಕೆಆರ್ ಪೇಟೆಯಲ್ಲಿ ಜೆಡಿಎಸ್ ಪರ ಬೆಟ್ಟಿಂಗ್ ಜೋರಾಗಿದೆ.

ಕೆಆರ್ ಪೇಟೆ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಬಿಎಲ್ ದೇವರಾಜ್ ಪರ ಒಂದು ಸಾವಿರ ರೂಪಾಯಿ, ಬಿಜೆಪಿ ಅಭ್ಯರ್ಥಿ ನಾರಾಯಣಗೌಡ ಪರ 700 ರೂಪಾಯಿ ಬೆಟ್ಟಿಂಗ್ ಕಟ್ಟಲಾಗಿದೆ. ಹುಣಸೂರಿನಲ್ಲಿ ಕಾಂಗ್ರೆಸ್, ಪಕ್ಷೇತರ ಅಭ್ಯರ್ಥಿ ಹಾಗೂ ವಿಶ್ವನಾಥ ಪರ ಬೆಟ್ಟಿಂಗ್ ಜೋರಾಗಿದೆ ಎಂದು ವರದಿ ಹೇಳಿದೆ.

ಚಿಕ್ಕಬಳ್ಳಾಪರದಲ್ಲಿ 10ರಿಂದ 15 ಲಕ್ಷ ರೂಪಾಯಿವರೆಗೆ ಬೆಟ್ಟಿಂಗ್ ಕಟ್ಟಲಾಗಿದೆಯಂತೆ. ಚಿಕ್ಕಬಳ್ಳಾಪುರದಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್ ಹಾಗೂ ಕಾಂಗ್ರೆಸ್ ಪಕ್ಷದ ಅಂಜನಪ್ಪ ನಡುವೆ ತೀವ್ರ ಸ್ಪರ್ಧೆ ಇದೆ.

ಬಚ್ಚೇಗೌಡ ವಿರುದ್ಧ ದೂರು ನೀಡಿದ್ದೇನೆ. ಈ ಬಗ್ಗೆ ಯಡಿಯೂರಪ್ಪ ಜತೆ ಚರ್ಚಿಸಿದ್ದೇನೆ. ಎಂಟಿಬಿ ನಾಗರಾಜ್. ಶರತ್ ಬಚ್ಚೇಗೌಡಗೆ ರಹಸ್ಯವಾಗಿ ಬೆಂಬಲ ನೀಡಿದ್ದಾರೆ.

Source:-udayavani

ಸಂಬಂಧಿತ ಪೋಸ್ಟ್ಗಳು

ತನಿಖೆಯಿಂದ ಹಿಂದೆ ಸರಿಯಲು ನಿರ್ಧಾರ

Ansar Aziz Nadwi

338 ಕೋಟಿ ರೂ. ಆಸ್ತಿ, ಡಿಕೆಶಿ ಸಹೋದರ ಡಿಕೆ ಸುರೇಶ್ ಗೂ ಇ.ಡಿ. ಸಮನ್ಸ್ ಜಾರಿ

Ansar Aziz Nadwi

ಸಿಎಂ ಅಮೆರಿಕ ಪ್ರವಾಸ: ಕರ್ನಾಟಕದಲ್ಲಿ ಹೂಡಿಕೆಗೆ ಕುಮಾರಸ್ವಾಮಿ ಆಹ್ವಾನ

Ansar Aziz Nadwi

ಒಂದು ಕಾಮೆಂಟ್ ಬಿಡಿ

ವಿಮರ್ಶೆ ಬಿಡಿ