ಅಂತಾರಾಷ್ಟ್ರೀಯ ಕರ್ನಾಟಕ

ಮೈಸೂರು ಮೂಲದ ಬಾಲಕನಿಗೆ ಜಾಗತಿಕ ಬಾಲ ಪ್ರತಿಭೆ ಪ್ರಶಸ್ತಿ

ಲಂಡನ್‌:(ಸೀಧಿಬಾತ್ ನ್ಯೂಸ್ ಸರ್ವಿಸ್) ಮೈಸೂರು ಮೂಲದ ಬಾಲಕ, ಯೋಗ ಚಾಂಪಿಯನ್‌ ಈಶ್ವರ್‌ ಶರ್ಮಾ ಜಾಗತಿಕ ಬಾಲ ಪ್ರತಿಭೆ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಪ್ರಾಗ್ಜೀವ ವಿಜ್ಞಾನ, ಸಾಹಸ ಕಲೆ, ನೃತ್ಯ ಮತ್ತಿತರ ವಲಯಗಳಿಂದ 45 ದೇಶಗಳಿಂದ 15 ಸಾವಿರ ಮಂದಿ ಈ ಪ್ರಶಸ್ತಿಗೆ ಅರ್ಜಿ ಸಲ್ಲಿಸಿದ್ದರು.

ಈ ಪೈಕಿ ನೂರು ಮಂದಿಯನ್ನು ಆಯ್ಕೆ ಮಾಡಲಾಗಿದ್ದು, ಮೈಸೂರಿನ ಬಾಲಕ ಈಶ್ವರ್‌ (10) ಹಾಗೂ ಹಾಡುಗಾರಿಕೆಯಲ್ಲಿ ದುಬೈನಲ್ಲಿರುವ ಭಾರತೀಯ ಮೂಲದ ಸಚೇತಾ ಸತೀಶ್‌(13) ಪ್ರಶಸ್ತಿ ಪುರಸ್ಕೃತರಾಗಿದ್ದಾರೆ. ಯೋಗದಲ್ಲಿ ವಿಶೇಷ ಪರಿಣಿತನಾಗಿರುವ ಈಶ್ವರ್‌ ಶರ್ಮಾ ಬ್ರಿಟನ್‌ ಸೇರಿ ವಿಶ್ಯಾದ್ಯಂತ 100 ಯೋಗ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾನೆ.

ಅಲ್ಲದೇ ವೇದ ಹಾಗೂ ಭಗವದ್ಗೀತೆಯ 50 ಶ್ಲೋಕಗಳನ್ನು ನಿರರ್ಗಳವಾಗಿ ಪಠಿಸುತ್ತಾನೆ. ಅಕ್ಟೋಬರ್‌ನಲ್ಲಿ ಕೆನಡಾದ ಎಡ್ಮೊಂಟನ್‌ನಲ್ಲಿ ನಡೆಯಲಿರುವ ವಿಶ್ವ ಯೋಗ ಚಾಂಪಿಯನ್‌ಶಿಪ್‌ಗೆ ಈ ಬಾಲಕ ಗ್ರೇಟ್‌ ಬ್ರಿಟನ್‌ನಿಂದ ಪ್ರತಿನಿಧಿಸುತ್ತಿದ್ದಾನೆ. ಈ ಪ್ರಶಸ್ತಿ ಲಭಿಸಿರುವುದು ಹೆಮ್ಮೆಯ ವಿಷಯ. ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಯೋಗ ಮಹತ್ವದ್ದಾಗಿದೆ ಎಂದು ಈಶ್ವರ್‌ ತಿಳಿಸಿದ್ದಾನೆ.

Source:-udayavani

ಸಂಬಂಧಿತ ಪೋಸ್ಟ್ಗಳು

ಸಮುದ್ರ ತಡೆಗೋಡೆ ಮೂರ್ಖತನ, ದುಬಾರಿ ಕಲ್ಪನೆ: ಟ್ರಂಪ್ ಕೆಂಗಣ್ಣು

Ansar Aziz Nadwi

ಸಚಿವ ಸ್ಥಾನ ನೀಡಲಿಲ್ಲ, ಕೊನೇ ಪಕ್ಷ ವಿಧಾನಸಭೆ ಉಪಾಧ್ಯಕ್ಷನನ್ನಾಗಿ ಮಾಡಿ: ಆನಂದ್ ಮಾಮನಿ

Ansar Aziz Nadwi

ಏಷ್ಯನ್ ಕುಸ್ತಿ ಚಾಂಪಿಯನ್‌ಶಿಪ್: ಫೈನಲ್ ತಲುಪಿದ ಸುನೀಲ್ ಕುಮಾರ್

Ansar Aziz Nadwi

ಒಂದು ಕಾಮೆಂಟ್ ಬಿಡಿ

ವಿಮರ್ಶೆ ಬಿಡಿ