ರಾಷ್ಟ್ರೀಯ ರಾಷ್ಟ್ರೀಯ ಸುದ್ದಿ

ಟ್ರಂಪ್‌ ಜಾರಿಗೆ ತಂದ ನಿಯಮಗಳ ಪ್ರಭಾವ : ಅಮೆರಿಕ ಪೌರತ್ವ ಶೇ.7.5ಕ್ಕೆ ಇಳಿಕೆ

ಪುಣೆ:(ಸೀಧಿಬಾತ್ ನ್ಯೂಸ್ ಸರ್ವಿಸ್) ಎರಡು ವರ್ಷಗಳ ಅವಧಿಯಲ್ಲಿ ಭಾರತದಿಂದ ಅಮೆರಿಕಕ್ಕೆ ವಲಸೆ ಹೋಗಿ ಅಲ್ಲಿನ ಪೌರತ್ವ ಪಡೆದಿರುವ ಪ್ರಮಾಣ ಶೇ.7.5ಕ್ಕೆ ಇಳಿಕೆಯಾಗಿದೆ. ನ್ಯಾಷನಲ್‌ ಫೌಂಡೇಷನ್‌ ಫಾರ್‌ ಅಮೆರಿಕನ್‌ ಪಾಲಿಸಿ ಎಂಬ ಆ ದೇಶದ ಚಿಂತಕರ ಚಾವಡಿ ನಡೆಸಿದ ಅಧ್ಯಯನದಿಂದ ಈ ಅಂಶ ಬೆಳಕಿಗೆ ಬಂದಿದೆ. ಡೊನಾಲ್ಡ್‌ ಟ್ರಂಪ್‌ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಅಲ್ಲಿ ‘ಅಮೆರಿಕದ ವಸ್ತುಗಳನ್ನು ಖರೀದಿಸಿ; ಉದ್ಯೋಗಕ್ಕೆ ಅಮೆರಿಕದವರನ್ನೇ ನೇಮಿಸಿ’ ಎಂಬ ನಿಯಮಕ್ಕೆ ಕಟ್ಟುನಿಟ್ಟಿನ ಆದ್ಯತೆ ಶುರುವಾದ ಬಳಿಕ ಈ ಕುಸಿತ ಶುರುವಾಗಿದೆ.

2016-17ನೇ ಸಾಲಿನಲ್ಲಿ 64, 687 ಮಂದಿ ಭಾರತೀಯರು ಅಮೆರಿಕದ ಪೌರತ್ವ (ಗ್ರೀನ್‌ ಕಾರ್ಡ್‌) ಪಡೆದುಕೊಂಡಿದ್ದರು. 2017- 18ನೇ ಸಾಲಿನಲ್ಲಿ ಅದರ ಸಂಖ್ಯೆ 59,821ಕ್ಕೆ ಇಳಿಕೆಯಾಯಿತು. ಇದರ ಜತೆಗೆ ‘ಅಮೆರಿಕದಲ್ಲಿ ವಾಸಿಸುವವರ ಹತ್ತಿರದ ಬಂಧುಗಳು’ ಎಂಬ ವಿಭಾಗದಲ್ಲಿಯೂ 20,652 ಗ್ರೀನ್‌ ಕಾರ್ಡ್‌ಗಳು ಕೊಡ ಮಾಡಲ್ಪ ಟ್ಟಿದ್ದವು. ಒಟ್ಟಾರೆಯಾಗಿ ಹೇಳುವುದಿದ್ದರೆ 2016- 17ನೇ ಸಾಲಿನಲ್ಲಿ 11,83,505 ಮಂದಿಯಿಂದ 2018ರ ಅವಧಿಗೆ ಒಟ್ಟು ಪೌರತ್ವ ಪಡೆದವರ 10,96,611ಕ್ಕೆ ಇಳಿಕೆಯಾಗಿದೆ.

ಅಮೆರಿಕ ಪೌರತ್ವ ಪಡೆಯಲು ಬೇಕಾಗಿರುವ ದಾಖಲೆಗಳ ಪರಿಶೀಲನೆ ಮತ್ತು ಸಂಬಂಧಿಸಿದ ಪ್ರಕ್ರಿಯೆಗಳು ಹೆಚ್ಚಿನ ಸಮಯ ತೆಗೆದುಕೊಳ್ಳುತ್ತಿವೆ. ಹೀಗಾಗಿ, ಭಾರತೀಯರ ಪ್ರಮಾಣ ಇಳಿಕೆಯಾಗಿದೆ. ಚಿಂತಕರ ಚಾವಡಿಯ ಅಧ್ಯಯನ ವರದಿ ಉಲ್ಲೇಖೀಸಿ ‘ದ ಇಕನಾಮಿಕ್‌ ಟೈಮ್ಸ್‌’ ವರದಿ ಮಾಡಿದೆ.

Source:-udayavani

ಸಂಬಂಧಿತ ಪೋಸ್ಟ್ಗಳು

ಜಾರ್ಖಂಡ್ ಚುನಾವಣಾ ಫಲಿತಾಂಶ; JMM, ಕಾಂಗ್ರೆಸ್ ಮೈತ್ರಿ ಬಹುಮತದತ್ತ, ಹೇಮಂತ್ ಮತ್ತೆ ಸಿಎಂ?

Ansar Aziz Nadwi

ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದ್ದರೆ ಸರ್ಕಾರಿ ಉದ್ಯೋಗವಿಲ್ಲ

Ansar Aziz Nadwi

ಪ್ರೀತಿ ಮಾಡಿ ಮದುವೆ ನಿರಾಕರಿಸಿದ ಯುವಕನ ಮುಖಕ್ಕೆ ಆಸಿಡ್ ಎರಚಿದ ಯುವತಿ

Ansar Aziz Nadwi

ಒಂದು ಕಾಮೆಂಟ್ ಬಿಡಿ

ವಿಮರ್ಶೆ ಬಿಡಿ