ರಾಷ್ಟ್ರೀಯ ರಾಷ್ಟ್ರೀಯ ಸುದ್ದಿ

ಹಳಿ ತಪ್ಪಿದ ಲೋಕಮಾನ್ಯ ತಿಲಕ್ ಎಕ್ಸ್ ಪ್ರೆಸ್ ರೈಲು: 20ಕ್ಕೂ ಹೆಚ್ಚು ಜನರಿಗೆ ಗಾಯ

ಕಟಕ್:(ಸೀಧಿಬಾತ್ ನ್ಯೂಸ್ ಸರ್ವಿಸ್) ಮುಂಬೈ- ಬಬುನೇಶ್ವರ್ ನಡುವಿನ ಲೋಕಮಾನ್ಯ ತಿಲಕ್ ಎಕ್ಸ್ ಪ್ರೆಸ್ ರೈಲು ಹಳಿ ತಪ್ಪಿ ಸುಮಾರು 20ಕ್ಕೂ ಹೆಚ್ಚು ಜನರು ಗಾಯಗೊಂಡ ಘಟನೆ ಇಂದು ಮುಂಜಾನೆ ಕಟಕ್ ಸಮೀಪ ನಡೆದಿದೆ.

ಒಡಿಶಾ ರಾಜ್ಯದ ಕಟಕ್ ಸಮೀಪದ ಸಾಲಗಾವ್ ಮತ್ತು ನೀರ್ಗುಂಡಿ  ಮಧ್ಯಭಾಗದಲ್ಲಿ ಈ ಘಟನೆ ನಡೆದಿದ್ದು, ಸುಮಾರು ಎಂಟು ಬೋಗಿಗಳು ಹಳಿ ತಪ್ಪಿದೆ ಎಂದು ವರದಿಯಾಗಿದೆ.

ಘಟನೆಯಲ್ಲಿ ಸುಮಾರು 20ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು, ಅದರಲ್ಲಿ ಆರು ಜನರು ಗಂಭೀರವಾಗಿದ್ದಾರೆಂದು ವರದಿಯಾಗಿದೆ.

ಸ್ಥಳದಲ್ಲಿ ಮಂಜು ಕವಿದಿತ್ತು. ಇದರಿಂದಾಗಿ ಲೋಕಮಾನ್ಯ ತಿಲಕ್ ಎಕ್ಸ್ ಪ್ರೆಸ್ ರೈಲು, ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದಿದೆ ಎಂದು ಪ್ರಾಥಮಿಕವಾಗಿ ವರದಿಯಾಗಿದೆ.

ಅಪಘಾತದಿಂದಾಗಿ ಐದು ಬೋಗಿಗಳು ಸಂಪೂರ್ಣವಾಗಿ ಹಳಿತಪ್ಪಿದ್ದು, ಉಳಿದ ಮೂರು ಬೋಗಿಗಳು ಭಾಗಶಃ ಹಳಿಯಲ್ಲಿದೆ ಎನ್ನಲಾಗಿದೆ.

ಗಾಯಾಳುಗಳನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ. ರಕ್ಷಣಾ ಕಾರ್ಯ ಆರಂಭವಾಗಿದೆ.

Source:-udayavani

ಸಂಬಂಧಿತ ಪೋಸ್ಟ್ಗಳು

ಜಮ್ಮು-ಕಾಶ್ಮೀರ ಇನ್ನು ಮುಂದೆ ರಾಜ್ಯವಲ್ಲ, ಕೇಂದ್ರಾಡಳಿತ ಪ್ರದೇಶ!

Ansar Aziz Nadwi

ದಿಲ್ಲಿಯಲ್ಲಿ ಭಾರಿ ಮಳೆ: ಸುಧಾರಿಸಿದ ವಾಯು ಗುಣಮಟ್ಟ

Ansar Aziz Nadwi

ಹೊಸದಿಲ್ಲಿಯಿಂದ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಕಣಕ್ಕೆ

Ansar Aziz Nadwi

ಒಂದು ಕಾಮೆಂಟ್ ಬಿಡಿ

ವಿಮರ್ಶೆ ಬಿಡಿ