ರಾಷ್ಟ್ರೀಯ ರಾಷ್ಟ್ರೀಯ ಸುದ್ದಿ

ನಿರ್ಭಯಾ ಪ್ರಕರಣ; ಅಪರಾಧಿ ಮುಕೇಶ್ ಕ್ಷಮಾದಾನ ಅರ್ಜಿ ತಿರಸ್ಕರಿಸಿದ ದಿಲ್ಲಿ ಲೆ. ಗವರ್ನರ್

ನವದೆಹಲಿ:(ಸೀಧಿಬಾತ್ ನ್ಯೂಸ್ ಸರ್ವಿಸ್) ಮಹತ್ವದ ಬೆಳವಣಿಗೆ ಎಂಬಂತೆ 2012ರ ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಅಪರಾಧಿ ಮುಕೇಶ್ ಸಲ್ಲಿಸಿದ್ದ ಕ್ಷಮಾದಾನ ಅರ್ಜಿಯನ್ನು ದಿಲ್ಲಿಯ ಲೆಫ್ಟಿನೆಂಟ್ ಗವರ್ನರ್ ಗುರುವಾರ ತಿರಸ್ಕರಿಸಿದ್ದು, ಮುಂದಿನ ನಿರ್ಧಾರಕ್ಕಾಗಿ ಕೇಂದ್ರ ಗೃಹ ಇಲಾಖೆಗೆ ಮನವಿಯನ್ನು ಕಳುಹಿಸಿರುವುದಾಗಿ ತಿಳಿಸಿದೆ.

ಮಾಧ್ಯಮ ವರದಿ ಪ್ರಕಾರ, ಮೊದಲು ಮುಕೇಶ್ ಕ್ಷಮಾದಾನ ಅರ್ಜಿಯನ್ನು ದಿಲ್ಲಿ ಸರ್ಕಾರ ವಜಾಗೊಳಿಸಿದ್ದು, ನಂತರ ಅರ್ಜಿ ವಜಾಗೊಳಿಸುವಂತೆ ಶಿಫಾರಸು ಮಾಡಿ ದಿಲ್ಲಿ ಲೆಫ್ಟಿನೆಂಟ್ ಗವರ್ನರ್ ಗೆ ಕಳುಹಿಸಿಕೊಟ್ಟಿತ್ತು. ದಿಲ್ಲಿ ಸರ್ಕಾರದ ಶಿಫಾರಸ್ಸನ್ನು ಪರಿಗಣಿಸಿದ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಅವರು ಕೇಂದ್ರ ಗೃಹ ಸಚಿವಾಲಯಕ್ಕೆ ಕಳುಹಿಸಿಕೊಟ್ಟಿರುವುದಾಗಿ ವರದಿ ವಿವರಿಸಿದೆ.

ಜನವರಿ 22ರಂದು ಅಪರಾಧಿಗಳನ್ನು ಗಲ್ಲಿಗೇರಿಸಬಾರದು ಎಂದು ದಿಲ್ಲಿ ಸರ್ಕಾರ ಹೈಕೋರ್ಟ್ ಗೆ ತಿಳಿಸಿದ್ದು, ಈ ಸಂದರ್ಭದಲ್ಲಿ ಡೆತ್ ವಾರಂಟ್ ಗೆ ತಡೆ ನೀಡಲು ಹೈಕೋರ್ಟ್ ನಿರಾಕರಿಸಿದ ನಂತರ ಈ ಬೆಳವಣಿಗೆ ನಡೆದಿದೆ ಎಂದು ವರದಿ ತಿಳಿಸಿದೆ.

Source:-udayavani

ಸಂಬಂಧಿತ ಪೋಸ್ಟ್ಗಳು

ಪೌರತ್ವ ಕಾಯ್ದೆ ಭಾರತದ ಮುಸ್ಲಿಮರಿಗೆ ವಿರುದ್ಧವಾಗಿಲ್ಲ: ಗಡ್ಕರಿ

Ansar Aziz Nadwi

ಕೊರೋನಾ ವಿರುದ್ಧ ಸಮರಕ್ಕಾಗಿ ಹಣ ಉಳಿತಾಯ-ಸರ್ಕಾರಕ್ಕೆ 5 ಅಂಶಗಳ ಸಲಹೆ ನೀಡಿದ ಸೋನಿಯಾ ಗಾಂಧಿ

Ansar Aziz Nadwi

ಸುಪ್ರೀಂನಲ್ಲಿ PIL ವಿಚಾರಣೆ: ಮನೆಗೆ ಮದ್ಯ ಸರಬರಾಜು ಮಾಡುವ ಬಗ್ಗೆ ಸರ್ಕಾರ ನಿರ್ಧರಿಸಬೇಕು

Ansar Aziz Nadwi

ಒಂದು ಕಾಮೆಂಟ್ ಬಿಡಿ

ವಿಮರ್ಶೆ ಬಿಡಿ