ರಾಷ್ಟ್ರೀಯ ರಾಷ್ಟ್ರೀಯ ಸುದ್ದಿ

ದಿಲ್ಲಿ AAP ಸರ್ಕಾರದ ನಿರ್ಲಕ್ಷ್ಯದಿಂದ ನಿರ್ಭಯಾ ಹಂತಕರ ಗಲ್ಲುಶಿಕ್ಷೆಗೆ ವಿಳಂಬ; ಜಾವ್ಡೇಕರ್

ನವದೆಹಲಿ:(ಸೀಧಿಬಾತ್ ನ್ಯೂಸ್ ಸರ್ವಿಸ್) ದೇಶಾದ್ಯಂತ ಆಕ್ರೋಶದ ಕಿಡಿಹಚ್ಚಿಸಿದ್ದ 2012ರ ನಿರ್ಭಯಾ ಗ್ಯಾಂಗ್ ರೇಪ್ ಮತ್ತು ಕೊಲೆ ಪ್ರಕರಣದ ನಾಲ್ವರು ಅಪರಾಧಿಗಳಿಗೆ ಗಲ್ಲುಶಿಕ್ಷೆ ವಿಧಿಸಲು ವಿಳಂಬವಾಗಲು ದಿಲ್ಲಿಯ ಆಮ್ ಆದ್ಮಿ ಪಕ್ಷದ ಸರ್ಕಾರವೇ ಕಾರಣ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ಗುರುವಾರ ಆರೋಪಿಸಿದ್ದಾರೆ.

ನಿರ್ಭಯಾ ಪ್ರಕರಣದ ಆರೋಪಿಗಳನ್ನು ಇದೀಗ ಗಲ್ಲಿಗೇರಿಸಲು ವಿಳಂಬವಾಗುತ್ತಿರುವುದಕ್ಕೆ ದಿಲ್ಲಿ ಸರ್ಕಾರದ ಬೇಜವಾಬ್ದಾರಿತನ ಕಾರಣ. ನ್ಯಾಯದ ವಿಳಂಬಕ್ಕೆ ಆಮ್ ಆದ್ಮಿ ಪಕ್ಷವೇ ಹೊಣೆ. ಕಳೆದ 2.5 ವರ್ಷಗಳ ಕಾಲ ದಿಲ್ಲಿ ಸರ್ಕಾರ ಆರೋಪಿಗಳಿಗೆ ಕ್ಷಮಾದಾನ ಅರ್ಜಿ ಸಲ್ಲಿಸಲು ಯಾಕೆ ನೋಟಿಸ್ ನೀಡಿಲ್ಲ ಎಂದು ಜಾವ್ಡೇಕರ್ ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನಿಸಿದರು.

ನಾಲ್ವರು ಅಪರಾಧಿಗಳನ್ನು ಜನವರಿ 22ರ ಬೆಳಗ್ಗೆ 7ಗಂಟೆಗೆ ಗಲ್ಲಿಗೇರಿಸಲು ಸಾಧ್ಯವಾಗುವುದಿಲ್ಲ. ಅದಕ್ಕೆ ಕಾರಣ ಒಬ್ಬ ಅಪರಾಧಿ ಈಗ ಕ್ಷಮಾದಾನ ಅರ್ಜಿಯನ್ನು ಸಲ್ಲಿಸಿರುವುದು. ಈ ಬಗ್ಗೆ ದಿಲ್ಲಿ ಸರ್ಕಾರವೇ ಬುಧವಾರ ಹೈಕೋರ್ಟ್ ಗೆ ತಿಳಿಸಿದೆ. ಆದರೆ ಕೋರ್ಟ್ ಡೆತ್ ವಾರಂಟ್ ಗೆ ತಡೆ ನೀಡಲು ನಿರಾಕರಿಸಿದ್ದು, ವಿಚಾರಣಾ ಕೋರ್ಟ್ ಮುಂದೆ ಹಾಜರಾಗಲು ತಿಳಿಸಿದೆ ಎಂದು ಹೇಳಿದರು.

ದಿಲ್ಲಿಯ ಪಟಿಯಾಲಾ ಹೌಸ್ ಕೋರ್ಟ್ ಕಳೆದ ವಾರ ವಿನಯ್ ಶರ್ಮಾ, ಮುಕೇಶ್ ಕುಮಾರ್, ಅಕ್ಷಯ್ ಕುಮಾರ್ ಸಿಂಗ್ ಮತ್ತು ಪವನ್ ಗುಪ್ತಾನನ್ನು ಜನವರಿ 22ರ ಬೆಳಗ್ಗೆ 7ಗಂಟೆಗೆ ಗಲ್ಲಿಗೇರಿಸುವಂತೆ ಡೆತ್ ವಾರಂಟ್ ಹೊರಡಿಸಿತ್ತು.

Source:-udayavani

ಸಂಬಂಧಿತ ಪೋಸ್ಟ್ಗಳು

“ಸಮಾಲೋಚನೆ ಬಳಿಕವೇ ಎನ್‌ಆರ್‌ಸಿ ಜಾರಿ’

Ansar Aziz Nadwi

ಫಾರೂಖ್ ಅಬ್ದುಲ್ಲಾ ಗೃಹ ಬಂಧನ ಪ್ರಶ್ನಿಸಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್

Ansar Aziz Nadwi

ಒಂದು ತಿಂಗಳು PAk ನಲ್ಲಿ ನೆಲೆಸಿ ಬನ್ನಿ: ಅಖಿಲೇಶ್ ಯಾದವ್ ಗೆ ಬಿಜೆಪಿ ಅಧ್ಯಕ್ಷ ಸಿಂಗ್ ಸವಾಲು

Ansar Aziz Nadwi

ಒಂದು ಕಾಮೆಂಟ್ ಬಿಡಿ

ವಿಮರ್ಶೆ ಬಿಡಿ