ರಾಷ್ಟ್ರೀಯ ರಾಷ್ಟ್ರೀಯ ಸುದ್ದಿ

ಸಂತ್ರಸ್ತರು ಕೇಂದ್ರದ ಆರ್ಥಿಕ ನೆರವು ಪಡೆಯಲು ಆಧಾರ್‌ ಕಡ್ಡಾಯ

ಹೊಸದಿಲ್ಲಿ:(ಸೀಧಿಬಾತ್ ನ್ಯೂಸ್ ಸರ್ವಿಸ್) ಕೋಮುಗಲಭೆ, ನಕ್ಸಲೀಯರ ಹಿಂಸೆಗೆ ಗುರಿಯಾದ, ಭಯೋತ್ಪಾದಕರ ದಾಳಿಗೆ ಬಲಿಯಾದ ನಾಗರಿಕರು ಕೇಂದ್ರ ಸರಕಾರದಿಂದ ಆರ್ಥಿಕ ನೆರವು ಪಡೆಯಬೇಕೆಂದರೆ ಆಧಾರ್‌ ನೀಡುವುದು ಅತ್ಯಗತ್ಯ ಎಂಬ ನಿಯಮ ರೂಪಿಸಲಾಗಿದೆ. ಈ ಬಗ್ಗೆ ಕೇಂದ್ರ ಗೃಹ ಸಚಿವಾಲಯ ಪ್ರಕಟನೆ ಹೊರಡಿಸಿದೆ.

ನೊಂದವರು ಆಧಾರ್‌ ಕಾರ್ಡ್‌ ಹೊಂದಿರದಿದ್ದಲ್ಲಿ ಅಂಥವರು ಕೂಡಲೇ ಆಧಾರ್‌ಗೆ ಅರ್ಜಿ ಸಲ್ಲಿಸಬೇಕು ಎಂದೂ ಹೇಳಿದೆ. ಗಡಿಯಾಚೆಯಿಂದ ಗುಂಡು ಹಾರಾಟ ಪ್ರಕರಣ, ಸುಧಾರಿತ ಸ್ಫೋಟಕ, ನೆಲಬಾಂಬ್‌ ಸ್ಫೋಟ, ನಕ್ಸಲೀಯರ ಹಿಂಸಾಕೃತ್ಯ, ಕೋಮು ಗಲಭೆ ಪ್ರಕರಣಗಳಲ್ಲಿ ನೊಂದ ನಾಗರಿಕರಿಗೆ ವಿತ್ತೀಯ ನೆರವು ಪಡೆಯಲು ಆಧಾರ್‌ ಅಗತ್ಯವಾಗಿದೆ. ರಾಜ್ಯ ಸರಕಾರಗಳ ಮೂಲಕ ಈ ನೆರವು ನೀಡಲಾಗುತ್ತದೆ. ಅದಕ್ಕಾಗಿ ವಾರ್ಷಿಕವಾಗಿ 6ರಿಂದ 7 ಕೋಟಿ ರೂ. ನಿಗದಿ ಮಾಡಲಾಗಿದೆ.

Source:-udayavani

ಸಂಬಂಧಿತ ಪೋಸ್ಟ್ಗಳು

ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ(SAIL)ದಲ್ಲಿನ ಷೇರು ಮಾರಾಟಕ್ಕೆ ಕೇಂದ್ರ ಸರ್ಕಾರದ ಚಿಂತನೆ

Ansar Aziz Nadwi

ಏರ್‌ಇಂಡಿಯಾ ಸಿಬಂದಿ ಮೇಲೆ ಕೈ ಮಾಡಿದ ಪ್ರಯಾಣಿಕರು

Ansar Aziz Nadwi

ಪ್ರಧಾನಿ ಮೋದಿ ದೇಶವನ್ನು ಏಕೆ ತಪ್ಪು ದಾರಿಗೆಳೆಯುತ್ತಿದ್ದಾರೆ ? ಅಸಾದುದ್ದೀನ್ ಓವೈಸಿ

Ansar Aziz Nadwi

ಒಂದು ಕಾಮೆಂಟ್ ಬಿಡಿ

ವಿಮರ್ಶೆ ಬಿಡಿ